ಭಟ್ಕಳ: ವಿಜ್ಞಾನಕ್ಕೆ ಸವಾಲೆಸೆದ ಭಯಾನಕ ಶಿಶು!?
ಕುಂದಾಪುರ: ಭಯಾನಕ ರೂಪದ ವಿಚಿತ್ರ ಹೆಣ್ಣು ಮಗುವೊಂದು ಜನಿಸಿ ವೈಜ್ಞಾನಿಕ ಲೋಕಕ್ಕೆ ಸವಾಲೆಸೆದ ಘಟನೆ ಭಟ್ಕಳದ ಹೊರಭಾಗದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹೌದು. ಇದು ವಿಚಿತ್ರವಾದರೂ ಸತ್ಯ. ಹೀಗೇ ಭಯಾನಕವೆನಿಸುವ ಮಗುವಿನ ಸ್ವರ, ಅಳು ಸಾಮಾನ್ಯ ಶಿಶುಗಳ ಹಾಗೆಯೇ ಇದೆ. ಆದರೆ ದೈಹಿಕ ರೂಪ ಮಾತ್ರ ಸೃಷ್ಟಿಯ ವೈಚಿತ್ರ್ಯ ಕ್ಕೆ ಬೆರಗಾಗುವಷ್ಟು ಸಂಚಲನವನ್ನುಂಟು ಮಾಡಿದೆ.
ಭಟ್ಕಳದಲ್ಲಿ ಕೆಲವು ವರ್ಷಗಳ ಹಿಂದೆ ವಾಸ್ತವ್ಯ ಹೂಡಿರುವ ಮುಸ್ಲಿಂ ದಂಪತಿಗಳ ಮೂರನೇ ಶಿಶುವೇ ಈ ರೀತಿಯ ವಿಚಿತ್ರ ರೂಪದಲ್ಲಿ ಜನಿಸಿದೆ ಎಂದು ಹೇಳಲಾಗಿದೆ. ಭಟ್ಕಳದ ನರ್ಸಿಂಗ್ ಹೋಂ ನಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ವಿಚಿತ್ರ ಮಗುವಿನ ಜನನಕ್ಕೆ ವಿವಿಧ ಕಾಮೆಂಟ್ ಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ನಡೆದ ಚಂದ್ರಗ್ರಹಣದ ಸಮಯದಲ್ಲಿಯೆ ಮಗು ಜನಿಸಿದ್ದು, ಅದರ ಪ್ರಭಾವದಿಂದಲೇ ಹೀಗಾಗಿದೆ ಎನ್ನುವುದು ಇನ್ನು ಕೆಲವರ ಅಭಿಪ್ರಾಯ. ಆದರೆ ಇದು ಕಾಕತಾಳೀಯ ಎನ್ನುವುದು ಮತ್ತೆ ಹಲವರ ವಾದ. ಅದೇನೇ ಇದ್ದರೂ ಸದ್ಯಕ್ಕೆ ಮಣಿಪಾಲದಲ್ಲಿ ಮಗುವಿನ ಚಿಕಿತ್ಸೆ ಮುಂದುವರಿದಿದೆ.
Strange ..may.baby recover and regain the natural look soon ..