ಕುಂದಾಪುರ: ಮೊಬೈಲ್ ಟವರ್ ಗೆ ಬೆಂಕಿ – ಶಾರ್ಟ್ ಸರ್ಕ್ಯೂಟ್ ಶಂಕೆ – ಅಂದಾಜು 40 ಲಕ್ಷ ನಷ್ಟ

ಕುಂದಾಪುರ: ಹಾಡಹಗಲೇ ಮೊಬೈಲ್ ಟವರ್ ಗೆ ಬೆಂಕಿ ಹತ್ತಿಕೊಂಡು ಉರಿದ ಪರಿಣಾಮ ಸುಮಾರು 40 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಭಾಷಾ ಟ್ರಾನ್ಸ್ಪೋರ್ಟ್ ಎದುರುಗಡೆ ಚಂದ್ರಶೇಖರ್ ಹತ್ವಾರ್ ಎಂಬುವರ ಮಾಲಕತ್ವದ ಜಾಗದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಘಟನೆ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ಬರುವುದಕ್ಕೆ ರಸ್ತೆ ಇರಲಿಲ್ಲ. ಪರಿಣಾಮವಾಗಿ ಟವರ್ ಸಂಪೂರ್ಣ ಸುಟ್ಟು ಹೋಗಿದೆ. ಅಲ್ಲದೇ ಟವರ್ ಗೆ ಸಂಬಂಧಿಸಿದ ಉಪಕರಣಗಳೂ ಸುಟ್ಟು ಹೋಗಿವೆ. ಎಸಿಟಿ ಕಂಪೆನಿ ಟವರನ್ನು ನಿರ್ವಹಣೆ ಮಾಡುತ್ತಿತ್ತು ಎಂದು ತಿಳಿದು ಬಂದಿದೆ.