AccidentBlogCrime newsHighlightsHuman storiesLifestyleLocal newsObituaryOthersTop StoriesTrendingWomen Care

ಸ್ಕೂಟರಿಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿಯಾಗಿ ಪರಾರಿ : ಮಹಿಳೆ ಸಾವು

Aware others:

ಕುಂದಾಪುರ: ಚಲಿಸುತ್ತಿದ್ದ ಸ್ಕೂಟರ್ ಒಂದಕ್ಕೆ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಹಿಂಬದಿ ಸವಾರೆಯಾಗಿ ಪ್ರಯಾಣಿಸುತ್ತಿದ್ದ ಮಹಿಳೆ ಸಾವನ್ನಪ್ಪಿ, ಸವಾರೆ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬ್ರಹ್ಮಾವರ ಸಮೀಪದ ಮಾಬುಕಳ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ಮಮ್ತಾಜ್ (44) ಹಾಗೂ ಗಾಯಗೊಂಡ ಸ್ಕೂಟರ್ ಸವಾರೆಯನ್ನು ಬ್ರಹ್ಮಾವರದ ಬಾರ್ಕೂರು ಉದ್ದಾಲಗುಡ್ಡೆ ನಿವಾಸಿ ಪೂರ್ಣಿಮಾ (47) ಎಂದು ಗುರುತಿಸಲಾಗಿದೆ.

ಪೂರ್ಣಿಮಾ ಅವರು ತಮ್ಮ ಪರಿಚಯದ ಮಮ್ತಾಜ್ ಎಂಬುವರ ಸ್ಕೂಟರ್ ನಲ್ಲಿ ಮಮ್ತಾಜ್ ಅವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಬಾರ್ಕೂರಿನಿಂದ ಆಕಾಶವಾಣಿ ಮಾರ್ಗವಾಗಿ ಸಾಸ್ತಾನ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊರಟು ಮಾಬುಕಳ ಸೇತುವೆ ಬಳಿ ತಲುಪುವಾಗ KA-20-AB-9033 ನೋಂದಣಿಯ ಟಿಪ್ಪರ್‌ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ನಲ್ಲಿದ್ದ ಪೂರ್ಣಿಮಾ ಹಾಗೂ ಮಮ್ತಾಜ್ ಇಬ್ಬರು ರಸ್ತೆಗೆ ಬಿದ್ದಿದ್ದಾರೆ. ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದ ಮಮ್ತಾಜ್ ಅವರನ್ನು ಹಾಗೂ ಸಣ್ಣಪುಟ್ಟ ಗಾಯಗಳಾಗಿದ್ದ ಪೂರ್ಣಿಮಾ ಅವರನ್ನು ಸ್ಥಳೀಯರು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಪಾಲಕಾರಿಯಾಗದೆ ಮಮ್ತಾಜ್ ರವರು ಮೃತಪಟ್ಟಿದ್ದಾರೆ. 

ಅಪಘಾತ ನಡೆಸಿದ ಟಿಪ್ಪರ್ ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

One thought on “ಸ್ಕೂಟರಿಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿಯಾಗಿ ಪರಾರಿ : ಮಹಿಳೆ ಸಾವು

  • Sad to see series of accidents in brahmavar and near by areas..

    Reply

Leave a Reply

Your email address will not be published. Required fields are marked *

error: Content is protected !!