AccidentAuto worldBlogEconomyHighlightsHuman storiesLifestyleLocal newsObituaryOthersTechTop StoriesTrendingWomen Care

ಬೈಕಿಗೆ ಕಾರು ಡಿಕ್ಕಿ – ದೆಹಲಿ ಉದ್ಯೋಗಿ, ಕುಂದಾಪುರದ ಅಜಿತ್ ಪೌಲ್ ಸಾವು

Aware others:

ಕುಂದಾಪುರ: ಬೈಕೊಂದಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ತಾಲೂಕಿನ  ಹೆಮ್ಮಾಡಿ ಗ್ರಾಮದ  ಮುವತ್ತುಮುಡಿಯ ಅರಾಟೆ ಬ್ರೀಜ್‌ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಕುಂದಾಪುರ ಜೆ.ಎಲ್.ಬಿ ರಸ್ತೆಯ ನಿವಾಸಿ, ದೆಹಲಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಅಜಿತ್ ಪೌಲ್ ಲೂವಿಸ್ (55) ಎಂದು ಗುರುತಿಸಲಾಗಿದೆ.

ಅಜಿತ್‌ ಪೌಲ್‌ ಲೂವಿಸ್ ತನ್ನ ಸುಜುಕಿ ಎಕ್ಸೆಸ್‌ ಸ್ಕೂಟರ್‌ ನಲ್ಲಿ ಕುಂದಾಪುರದ ತನ್ನ ಮನೆಯಿಂದ ಮೊವಾಡಿಯ ಡಾನ್ ಬಾಸ್ಕೋ ಶಾಲೆಯಲ್ಲಿ ಓದುತ್ತಿರುವ ತನ್ನ ಮಗಳಿಗೆ ಪುಸ್ತಕ ಕೊಡಲೆಂದು  ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದರು. ಅರಾಟೆ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ದ್ವಿಮುಖ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಇದೇ ಸಂದರ್ಭ  ತ್ರಾಸಿ/ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಅಬಿದ ಅಬುಸಾಲಿಹ ಬೀಕ್ಬ ಎಂಬಾತ  KA47-A-7792ನೇ ಕಾರಿನಲ್ಲಿ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು ಎದುರುಗಡೆಯಿಂದ ಢಿಕ್ಕಿ ಹೊಡೆದಿದ್ದಾನೆ.  ಅಪಘಾತದ ಪರಿಣಾಮ ಪರಿಣಾಮ ಅಜಿತ್‌ ಪೌಲ್‌ ಲೂವಿಸ್ ರವರ ತಲೆಗೆ, ಕೈ ಕಾಲುಗಳಿಗೆ ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರ ರಕ್ತಗಾಯವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತ ಅಜಿತ್ ಲೂವಿಸ್ 90ರ ದಶಕದಲ್ಲಿಯೇ ಉದ್ಯಮಕ್ಕೆ ಕೈ ಹಾಕಿದ್ದರು. ಕುಂದಾಪುರದಲ್ಲಿ ಅವರ ಮಿತ್ರ ಸತೀಶ್ ಖಾರ್ವಿ ಜೊತೆ SANJOSE DATA SYSTEMS ಎಂಬ ಜನಪ್ರಿಯ ಗ್ರಾಫಿಕ್ಸ್ ಸಂಸ್ಥೆ ಸ್ಥಾಪಿಸಿದ್ದರು. ಬಳಿಕ ಗಲ್ಫ್ ರಾಷ್ಟ್ರದಲ್ಲಿ ಜಿಂದಾಲ್ ಕಂಪೆನಿಯಲ್ಲಿ ದುಡಿದು ಇತ್ತೀಚೆಗೆ ಅದೇ ಕಂಪೆನಿಯ ದೆಹಲಿ ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ತನ್ನ ಅಸ್ವಸ್ಥ ತಾಯಿಯನ್ನು ನೋಡಲು ಕಳೆದ ಗುರುವಾರ ಊರಿಗೆ ಬಂದಿದ್ದರು. ಅವರ ಪತ್ನಿ ಹಾಗೂ ಪುತ್ರ ಖಾಸಗೀ ಶಿಕ್ಷಣ ಸಂಸ್ಥೆಯೊಂದರಲ್ಲಿ ಉದ್ಯೋಗಿಗಳಾಗಿದ್ದಾರೆ. ಮಗಳು ತ್ರಾಸಿ ಸಮೀಪದ ಡಾನ್ ಬಾಸ್ಕೋ ಶಾಲೆಯಲ್ಲಿ ಓದುತ್ತಿದ್ದಾಳೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!