ಒತ್ತಿನೆಣೆಯಲ್ಲಿ ರೋಡ್ ಗಾರ್ಡ್ ಗೆ ಅಪ್ಪಳಿಸಿದ ಬೈಕ್ – ಸವಾರ ಸಾವು
ಕುಂದಾಪುರ: ಬೈಕೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಕ್ರೀಟ್ ರೋಡ್ ಗಾರ್ಡ್ ಅಪ್ಪಳಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರು ಸಮೀಪದ ಒತ್ತಿನೆಣೆ ಇಳಿಜಾರಿನಲ್ಲಿ ಶನಿವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ಭಟ್ಕಳ ತಾಲೂಕಿನ ಬೆಳ್ಕೆ ನಿವಾಸಿ ಉಮೇಶ ಮಂಜುನಾಥ ಮೊಗೇರ್ (43) ಎಂದು ಗುರುತಿಸಲಾಗಿದೆ.

ಮಂಜುನಾಥ್ ಮೊಗೇರ್ ತನ್ನ ಪತ್ನಿ ಪದ್ಮಾ ಎಂಬುವರ ಜೊತೆಗೆ ಕುಂದಾಪುರ ಆಸ್ಪತ್ರೆಗೆ ತೆರಳಿ ಬಳಿಕ ಭಟ್ಕಳದ ಮನೆಗೆ ತೆರೆಳುತ್ತಿರುವ ವೇಳೆ ಈ ಘಟನೆ ನಡೆದಿದೆ. ಪದ್ಮಾ ಮೊಗೇರ್ ಗೂ ಕೂಡ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಮಂಜುನಾಥ್ ಮೊಗೇರ್ ರಾತ್ರಿ ವೇಳೆ ಮೀನುಗಾರಿಕೆಗೆ ತೆರಳಿ ಬೆಳಿಗ್ಗೆ ಬೈಕ್ ನಲ್ಲಿ ಕುಂದಾಪುರಕ್ಕೆ ಹೋಗಿ ವಾಪಾಸ್ಸಾಗುತ್ತಿದ್ದರು ಎನ್ನಲಾಗಿದೆ. ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

