ಕುಂದಾಪುರ: ‘ರೋಷನ್ ಹೋಮಿಯೋಪತಿ’ ನೂತನ ಕ್ಲಿನಿಕ್ ಉದ್ಘಾಟನೆ ಹಾಗೂ ಆಶೀರ್ವಚನ
ಕುಂದಾಪುರ: 1996 ರಿಂದ ಸೇವೆ ಸಲ್ಲಿಸುತ್ತಿರುವ ‘ರೋಷನ್ ಹೋಮಿಯೋಪತಿ’ ಸಂಸ್ಥೆಯ ನೂತನ ಕ್ಲಿನಿಕ್‌ನ ಉದ್ಘಾಟನೆ ಮತ್ತು ಆಶೀರ್ವಚನ ಸಮಾರಂಭವು ಇಂದು ಕುಂದಾಪುರದ ಮುಖ್ಯ ರಸ್ತೆಯಲ್ಲಿರುವ ರಿಲಯನ್ಸ್ ಸ್ಮಾರ್ಟ್ ಬಜಾರ್ ಎದುರಿನ ಶ್ರೀ ಸಾಯಿ ಸೆಂಟರ್‌ನ ಮೊದಲ ಮಹಡಿಯಲ್ಲಿ ನೆರವೇರಿತು. ಡಾ. ರೋಷನ್ ಪಾಯಸ್ ಅವರ ತಾಯಿ ಐವಿ ಪಾಯಸ್ ಅವರು ನೂತನ ಕ್ಲಿನಿಕ್ ಅನ್ನು ಉದ್ಘಾಟಿಸಿದರು.





ಕುಂದಾಪುರದ ಸಮೂಹ ಚರ್ಚ್ ಗಳ ಧರ್ಮಗುರು ಫಾ. ಪೌಲ್ ರೇಗೊ ಅವರು ನೂತನ ಸಂಸ್ಥೆಗೆ ಆಶೀರ್ವಚನ ನೀಡಿ, “ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಹೋಮಿಯೋಪತಿ ವೈದ್ಯಕೀಯ ಪದ್ಧತಿ ಅತೀ ಶ್ರೇಷ್ಠವಾದುದು. ಹೋಮಿಯೋಪತಿ ನಿಧಾನವಾದರೂ ಅತೀ ಪರಿಣಾಮಕಾರಿ ವೈದ್ಯಕೀಯ ಪದ್ಧತಿಯಾಗಿದ್ದು, ಡಾ. ನೇಹಾ ಪಾಯಸ್ ಮೂಲಕ ಕುಂದಾಪುರದ ಜನತೆಗೆ ಉತ್ತಮ ಸೇವೆ ದೊರೆಯಲಿದೆ. ಡಾ. ರೋಷನ್ ಕುಟುಂಬ ಹೋಮಿಯೋಪತಿ ಮೂಲಕ ಜನರ ಆರೋಗ್ಯ ಸುಧಾರಿಸುವಲ್ಲಿ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.





ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಉತ್ತಮ್ ಕುಮಾರ್ ಶೆಟ್ಟಿ ಅವರು, ಹೋಮಿಯೋಪತಿ ವೈದ್ಯಕೀಯ ಪದ್ಧತಿ ಬೆಳೆದು ಬಂದ ದಾರಿ, ಕುಂದಾಪುರದಲ್ಲಿ ಆರಂಭದ ದಿನಗಳ ಅನುಭವಗಳು ಹಾಗೂ ವೈದ್ಯ ಮತ್ತು ರೋಗಿಗಳ ನಡುವಿನ ಆತ್ಮೀಯ ಸಂಬಂಧಗಳ ಕುರಿತು ವಿವರಿಸಿದರು.




ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರಿನ ಫಾದರ್‌ಮುಲ್ಲರ್ಸ್ ಹೋಮಿಯೋಪತಿ ಮೇಇಕಲ್ ಕಾಲೇಜಿನ ಮಾಜೀ ಆಡಳಿತಾಧಿಕಾರಿ ಫಾ. ಸ್ಟ್ಯಾನಿ ತೌರೊ, ಬೈಂದೂರು ಸೆಂಟ್ ಥಾಮಸ್ ಶಾಲೆಯ ಪ್ರಾಂಶುಪಾಲ ಫಾ. ಫಿಲಿಪ್ ನೆಲ್ಲಿವಿಲ, ಫಾ. ಡೆನಿಸ್ ಡಿಸೋಜಾ, ಹಾಗೂ ಶ್ರೀ ಗ್ರೇಶಿಯನ್ ಪಾಯಸ್ ಅವರು ನೂತನ ಕ್ಲಿನಿಕ್‌ಗೆ ಶುಭ ಹಾರೈಸಿದರು.





ಇದೇ ಸಂದರ್ಭ ಕ್ಲಿನಿಕ್ ವಿನ್ಯಾಸಗೊಳಿಸಿದ ಇಂಜಿನಿಯರ್ ಶ್ರೀನಿವಾಸ ರಾವ್ ಅವರನ್ನು ಅಭಿನಂದಿಸಲಾಯಿತು. ಡಾ. ನೇಹಾ ಮರಿಟಾ ಪಾಯಸ್ ಅವರ ತಂದೆ ಡಾ. ರೋಷನ್ ಪಾಯಸ್, ತಾಯಿ ಶ್ರೀಮತಿ ಅನಿತಾ ಪಾಯಸ್, ಸಹೋದರ ನೋಯೆಲ್ ಪಾಯಸ್ ಸೇರಿದಂತೆ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಡಾ. ರೋಷನ್ ಪಾಯಸ್ ಸ್ವಾಗತಿಸಿದರು. ಡಾ. ನೇಹಾ ಮರಿಟಾ ಪಾಯಸ್ ವಂದಿಸಿದರು. ಪ್ರದೀಪ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಕ್ಲಿನಿಕ್ ಸಮಯದ ವಿವರ:
ಡಾ. ರೋಷನ್ ಪಾಯಸ್ (BHMS SCPH+): ಕುಂದಾಪುರದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ; ಬೈಂದೂರಿನಲ್ಲಿ ಮಧ್ಯಾಹ್ನ 12ರಿಂದ 2ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ಲಭ್ಯರಿರುತ್ತಾರೆ.
ಡಾ. ನೇಹಾ ಮರಿಟಾ ಪಾಯಸ್ (BHMS): ಕುಂದಾಪುರದಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಲಭ್ಯರಿರುತ್ತಾರೆ (ಬೈಂದೂರಿನಲ್ಲಿ ಅಪಾಯಿಂಟ್‌ಮೆಂಟ್ ಆಧಾರದ ಮೇಲೆ ಸೇವೆ ಲಭ್ಯ). (ಭಾನುವಾರ ರಜೆ).

Congratulations both