ಕುಂದಾಪುರ: ಕುಂದಾಪುರ ಮುರಾರ್ಜಿ ದೇಸಾಯಿ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಬಾಲ್ಯ ವಿವಾಹ ವಿರೋಧಿ ದಿನಾಚರಣೆ

ಕುಂದಾಪುರ: ಈ ದಿನ ಅಂತರಾಷ್ಟ್ರೀಯ ಬಾಲ್ಯ ವಿವಾಹ ವಿರೋಧಿ ದಿನ ಈ ದಿನವನ್ನು ಕುಂದಾಪುರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೆಣ್ಣು ಮಕ್ಕಳು ವಸತಿ ನಿಲಯದಲ್ಲಿ ಆಚರಿಸಲಾಯಿತು.

ವಸತಿ ನಿಲಯದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ತಾಲೂಕು ಕಲ್ಯಾಣಾಧಿಕಾರಿ ಆಶಾದೇವಿ ಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ಮಂಗಳೂರಿನ ಪಡಿ ಸಂಸ್ಥೆಯ ಪ್ರತಿನಿಧಿ ಬಿ ಮೋಹನ್ಚಂದ್ರ ಕಾಳಾವರ್ಕಾರ್ ಹಾಗೂ ನಮ್ಮ ಪ್ರಗತಿ ಗ್ರಾಮೀಣ ಅಭಿವೃದ್ಧಿ ಮತ್ತು ತಲುಪಿಸುವ ತರಬೇತಿ ಸಂಸ್ಥೆ ಕಾಳಾವರ ಇದರ ಅಧ್ಯಕ್ಷ ಮಂಜುನಾಥ ಜಿ ಉಪಸ್ಥಿತರಿದ್ದು ಭಾಗವಹಿಸಿದ್ದರು


ಕುಂದಾಪುರದ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಕೂಡ ಅಂತರಾಷ್ಟ್ರೀಯ ಬಾಲ್ಯ ವಿವಾಹ ವಿರೋಧಿ ದಿನವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕಿ ಪ್ರಭಾದೇವಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ದಿಂದಾಗುವ ದುಷ್ಪರಿಣಾಮ ಹಾಗೂ ಜಾಗೃತಿ ಗೀತೆಗಳು ಹಾಗೂ ಮಾಹಿತಿಯನ್ನು ಮಕ್ಕಳಿಗೆ ನೀಡಲಾಯಿತು ಜೊತೆಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಬಳಿಕ ಬಾಲ್ಯ ವಿವಾಹನ ಸಂಪೂರ್ಣವಾಗಿ ವಿರೋಧಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು.
