BlogCulturalEconomyEducationEntertainmentFashionHighlightsHuman storiesLifestyleLocal newsOthersTop StoriesTrendingWomen Care

ಕುಂದಾಪುರ: ಕ್ರೈಸ್ತ‌ ಬಾಂಧವರ ತೆರಾಲಿ ಹಬ್ಬ ಸಂಪನ್ನ: ಮೆರುಗು ಹೆಚ್ಚಿಸಿದ ಯೇಸುವಿನ ಪರಮ‌ಪ್ರಸಾದ‌ ಮೆರವಣಿಗೆ

Aware others:

ಕುಂದಾಪುರ: ಇಲ್ಲಿನ ಹೋಲಿ ರೋಜರಿ ಚರ್ಚಿನ ತೆರಾಲಿ ಹಬ್ಬದ ಪ್ರಯುಕ್ತ ಪ್ರಭು ಯೇಸು ಕ್ರಿಸ್ತರ ಪರಮ ಪ್ರಸಾದದ ಮೆರವಣಿಗೆಯು 22-11-2026ರ ಭಾನುವಾರ ಸಂಜೆ ಬಹಳ ವಿಜೃಂಭಣೆಯಿಂದ ಜರುಗಿತು.

ಚರ್ಚಿನಲ್ಲಿ ನಡೆದ ಪವಿತ್ರ ಬಲಿಪೂಜೆಯ ಬಳಿಕ ಹೊರಟ ಈ ಮೆರವಣಿಗೆಯಲ್ಲಿ ಭಕ್ತಾಧಿಗಳು ಉರಿಯುವ ಮೊಂಬತ್ತಿಗಳನ್ನು ಕೈಯಲ್ಲಿ ಹಿಡಿದು ಭಕ್ತಿಭಾವದಿಂದ ಭಾಗವಹಿಸಿದರು.

ಇತರ ಧರ್ಮದ ಬಾಂಧವರು ತಮ್ಮ ಮನೆಗಳ ಮುಂದೆ ಮೊಂಬತ್ತಿಗಳನ್ನು ಉರಿಸಿ ಗೌರವ ಸೂಚಿಸಿದರು.

ಮೆರವಣಿಗೆಯು ಚರ್ಚಿನ ಆವರಣದಿಂದ ಪ್ರಾರಂಭವಾಗಿ ಕುಂದಾಪುರದ ಪ್ರಮುಖ ಬೀದಿಗಳಲ್ಲಿ ಸಾಗಿ ಶಾಸ್ತ್ರಿ ವ್ರತ್ತದಿಂದ ಸೈಂಟ್ ಮೇರಿಸ್ ಮೈದಾನಕ್ಕೆ ಬಂದು ಅಲ್ಲಿ ಪರಮ ಪ್ರಸಾದದ ಆರಾಧನೆ, ದೇವರ ವಾಕ್ಯದ ವಾಚನ ನಡೆಯಿತು.

ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿದ ರೆವರೆಂಡ್ ಫಾ. ಪ್ರವೀಣ್ ಪಿಂಟೊ ( ಓ. ಸಿ. ಡಿ ) ಅವರು ಧಾರ್ಮಿಕ ಪ್ರವಚನ ನೀಡಿದರು.

ಈ ಸಂದರ್ಭದಲ್ಲಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಪೌಲ್ ರೇಗೊ ಮತ್ತು ಸೈಂಟ್ ಮೇರಿಸ್ ಕಾಲೇಜ್ ಹಾಗೂ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂದನೀಯ ರೋಲ್ವಿನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!