BlogEconomyEducationGovernmentHighlightsHuman storiesLifestyleLocal newsOthersState newsTop StoriesTrending

ಉಡುಪಿ: ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಅಮಾನತ್ತು- ತಾತ್ಕಾಲಿಕ ಸೇವೆಗೆ ಡಯಟ್ ಗೆ ಸ್ಥಳಾಂತರ

Aware others:

ಉಡುಪಿ: ತಮ್ಮ ವ್ಯಾಪ್ತಿಯ ಶಿಕ್ಷಕರಿಗೆ ನಿರಂತರ ಕಿರುಕುಳ ನೀಡುತ್ತಿರುವ ಆರೋಪದ‌ ಜೊತೆಗೆ  ಮೇಲಧಿಕಾರಿಗಳ ಮಾತಿಗೇ ಕ್ಯಾರೇ ಎನ್ನದೇ ಕರ್ತವ್ಯ ಲೋಪ ಎಸಗಿರುವ ಆರೋಪದ‌ ಹಿನ್ನೆಲೆಯಲ್ಲಿ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಅವರನ್ನು ತಕ್ಷಣದಿಂದ ಜ್ಯಾರಿಗೆ ಬರುವಂತೆ ಶಿಸ್ತುಕ್ರಮ ಬಾಕಿ ಇರಿಸಿ ಅಮಾನತ್ತು ಮಾಡಲಾಗಿದೆ.

ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1958’ರ ನಿಯಮ-98 ರನ್ವಯ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಹಾಗೂ ಸದರಿ ಅಧಿಕಾರಿಯ ಲೀನ್ ಸ್ಥಾನವನ್ನು ಹಿರಿಯ ಉಪನ್ಯಾಸಕರು, ಡಯಟ್, ಉಡುಪಿ ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗೆ ವರ್ಗಾಯಿಸಲಾಗಿದೆ ಎಂಬುದಾಗಿ ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ಕಾರ್ಯದರ್ಶಿ ವೆಂಕಟೇಶ್ ಅವರು ಅಮಾನತು ಅದೇಶ ಹೊರಡಿಸಿದ್ದಾರೆ.

ಆದೇಶದಂತೆ ಅಮಾನತ್ತುಗೊಂಡಿರುವ ಅಧಿಕಾರಿಯು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ಈ ಬಗ್ಗೆ ವಾಸ್ತವ.ಕಾಮ್ ಸವಿಸ್ತಾರವಾದ ವರದಿ ಬಿತ್ತರಿಸಿದ್ದು, ಶಿಕ್ಷಣ ಇಲಾಖೆ ತಕ್ಷಣ ಸ್ಪಂದಿಸಿದೆ.


Aware others:

Leave a Reply

Your email address will not be published. Required fields are marked *

error: Content is protected !!