BlogCulturalEconomyEducationEntertainmentFashionHighlightsHuman storiesLifestyleLocal newsOthersSuccess storiesTop StoriesTrendingWomen Care

ಕೋಟೇಶ್ವರ: ಜೆಸಿಐ ಕೋಟೇಶ್ವರ ಧ್ವಜಪುರ ಉದ್ಘಾಟನೆ

Aware others:

ಕುಂದಾಪುರ:  ಜೆಸಿಐ ಉಡುಪಿ ಸಿಟಿ ಇವರಿಂದ ಪ್ರವರ್ತಿಸಲ್ಪಟ್ಟ ಜೆಸಿಐ ಕೋಟೇಶ್ವರ ಧ್ವಜಪುರ ಇದರ ಉದ್ಘಾಟನೆ ಅಕ್ಟೋಬರ್ 13ರಂದು ಕೋಟೇಶ್ವರದ ಏಕಮ್ ವಿಶುಯಲ್ಸ್ ಸ್ಟುಡಿಯೋದಲ್ಲಿ ನಡೆಯಿತು.

ಘಟಕವನ್ನು ಉದ್ಘಾಟಿಸಿದ ಜೆಸಿ ವಲಯ 15ರ ವಲಯ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ, ಕೋಟೇಶ್ವರ ಭಾಗದ ಯುವಕ ಯುವತಿಯರಿಗೆ ಒಂದು ಒಳ್ಳೆಯ ವೇದಿಕೆ ನಿರ್ಮಾಣ ಮಾಡಿದ್ದಕ್ಕಾಗಿ ಜೆಸಿಐ ಉಡುಪಿ ಸಿಟಿಯನ್ನು ಅಭಿನಂದಿಸಿದರು. ಬಳಿಕ ನೂತನ ಸದಸ್ಯರಿಗೆ ಪ್ರಮಾಣ ವಚನ ಭೋದಿಸಿ, ಜೇಸಿ ಆಂದೋಲನಕ್ಕೆ 11 ಸದಸ್ಯರನ್ನು ಸ್ವಾಗತಿಸಿದರು.

ಇದೇ ಸಂದರ್ಭ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಜೆ ಸಿ ಅಶೋಕ ತೆಕ್ಕಟ್ಟೆಯವರನ್ನು ಅಭಿನಂದಿಸಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು, ಜೆ ಸಿ ಸಂಸ್ಥೆಯ ಅಭಿವೃದ್ಧಿ ಅವಕಾಶಗಳನ್ನ ತಿಳಿಸಿಕೊಟ್ಟರು.

ಜೆಸಿ ಡಾ. ಜಗದೀಶ್ ಜೋಗಿ ಕೋಟೇಶ್ವರದಲ್ಲಿ ಒಂದು ಜೆಸಿ ಸಂಸ್ಥೆಯ ಅಗತ್ಯ ಇತ್ತು ಎನ್ನುವುದನ್ನು ಒತ್ತಿ ಹೇಳಿದರು. ಜೆ ಸಿ ಐ ಉಡುಪಿ- ಸಿಟಿ ಘಟಕದ ಜೆಸಿ ಪಲ್ಲವಿ ಕೊಡಗು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನೂತನ ಘಟಕದ ಕಾರ್ಯದರ್ಶಿ ಸಮಿಯ ಹೆಗಡೆ, ಜೆಸಿಐ ಕೋಟೇಶ್ವರ ಧ್ವಜಪುರ ಇದರ ನಿಯೋಜಿತ ಅಧ್ಯಕ್ಷ ಅನಿರುದ್ಧ್ ಜೋಗಿ,  ನಿಯೋಜಿತ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಭಟ್ ಉಪಸ್ಥಿತರಿದ್ದರು.  ಬಾಸುಮ ಕೊಡಗು ಓರಿಯೆಂಟೇಶನ್ ತರಬೇತಿ ನೀಡಿದರು.


Aware others:

Leave a Reply

Your email address will not be published. Required fields are marked *

error: Content is protected !!