BlogEntertainmentFashionGovernmentHighlightsHuman storiesLifestyleLocal newsOthersTop StoriesTrending

ಕುಂದಾಪುರ: ಸಚಿವರ ಭೇಟಿ ಬೆನ್ನಿಗೇ ಪುರಸಭೆ ಒಳಚರಂಡಿ ವೈಫಲ್ಯ – ಪೊಲೀಸ್ ವಸತಿ ಗೃಹಗಳ ಸಮೀಪವೇ ರಸ್ತೆ ಮೇಲೆ ಹರಿದ ತ್ಯಾಜ್ಯ, ಸಾರ್ವಜನಿಕರ ಆಕ್ರೋಶ

Aware others:

ಕುಂದಾಪುರ: ರಾಜ್ಯ ಪೌರಾಡಳಿತ ಸಚಿವ ಹೆಚ್.ಸಿ ಬಾಲಕೃಷ್ಣ ಅವರ ಕುಂದಾಪುರ ಪುರಸಭೆಯ ಯುಜಿಡಿ ಪರಿಶೀಲನಾ ಭೇಟಿಯ ಬೆನ್ನಲ್ಲೇ ಯುಜಿಡಿ ವೈಫಲ್ಯ ಬಹಿರಂಗಗೊಂಡಿದೆ. ಕುಂದಾಪುರ ಪುರಸಭೆ ವ್ಯಾಪ್ತಿಯ ಫೇರಿ ವಾರ್ಡ್ನಲ್ಲಿ ಪೊಲೀಸ್ ಕ್ವಾಟರ್ಸ್ ಬಳಿ ಸಚಿವರ ಭೇಟಿ ದಿನದಿಂದಲೇ ಡ್ರೈನೇಜ್ ಓವರ್ ಫ್ಲೋ ಆಗಿ ನಡು ರಸ್ತೆಯಲ್ಲಿ ತ್ಯಾಜ್ಯ ಹರಿಯುತ್ತಿದೆ.

ಈ ಬಗ್ಗೆ ಸ್ಥಳೀಯ ನಿವಾಸಿಗಳಾದ ಉದಯ್ ಭಂಡಾರ್ಕರ್, ಶೋಭಾ ಭಂಡಾರ್ಕರ್, ಅಶ್ವಿನಿ ಭಂಡಾರ್ಕರ್, ಚಂದ್ರಕಲಾ ಕಾಮತ್, ಪನ್ನಗ ಕಾಮತ್, ರತ್ನಾಕರ್ ಭಂಡಾರ್ಕರ್, ವಿನಾಯಕ ಕಾಮತ್, ಶಶಿಧರ್ ಭಟ್, ಶಾಂತಿ ಭಟ್, ಪೊಲೀಸ್ ಕ್ವಾರ್ಟರ್ಸ್ ಸಿಬ್ಬಂದಿಗಳು ಹಾಗೂ ಇನ್ನಿತರರು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಮಾಜಿ ಪುರಸಭಾ ಸದಸ್ಯ ಕೇಶವ ಭಟ್ ಅವರು ಕುಂದಾಪುರ ಉಪವಿಭಾಗಾಧಿಕಾರಿಗಳಾದ ರಶ್ಮಿ ಎಸ್ ಆರ್ ಅವರ ಗಮನಕ್ಕೆ ತಂದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು, ತಾತ್ಕಾಲಿಕವಾಗಿ ತ್ಯಾಜ್ಯ ನೀರು ಹರಿಯುವುದನ್ನು ಬಂದ್ ಮಾಡಿದ್ದಾರೆ. ಈ ಬಗ್ಗೆ ಕೇಶವ ಭಟ್ ಉಪವಿಭಾಗಾಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ಎಲ್ಲೆಡೆಯೂ ಒಳಚರಂಡಿ ಸಮಸ್ಯೆ ಬಾಧಿಸುತ್ತಿದ್ದು, ಪುರಸಭೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!