BlogCulturalFashionGovernmentHighlightsHuman storiesLifestyleLocal newsOthersSportsState newsSuccess storiesTop StoriesTrendingWomen Care

ಅಮಾಸೆಬೈಲು ಎಸೈ ಸುಧಾರಾಣಿ ಟಿ.ಗೆ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ

Aware others:

ಕುಂದಾಪುರ: ಇತ್ತೀಚೆಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ ನಡೆದ ಪಿಸ್ತೂಲ್ ಶೂಟಿಂಗ್ ನಲ್ಲಿ ಅಮಾಸೆಬೈಲು ಪೊಲೀಸ್ ಠಾಣಾಧಿಕಾರಿ ಸುಧಾರಾಣಿ ಟಿ. ಅವರಿಗೆ ಬೆಳ್ಳಿ ಪದಕ ಲಭಿಸಿದೆ.

ಬೆಂಗಳೂರಿನ ಕೆ.ಎಸ್.ಆರ್.ಪಿ ಕ್ರೀಡಾಂಗಣದಲ್ಲಿ ಜನವರಿ 16ರಿಂದ 18ರ ವರೆಗೆ ಇಲಾಖಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಕೆ.ಎಸ್.ಆರ್.ಪಿ. ಪೊಲೀಸ್ ಮಹಾ ನಿರೀಕ್ಷಕ ಸಂದೀಪ್ ಪಾಟೀಲ್ ಐಪಿಎಸ್ ಹಾಗೂ ಕರ್ನಾಟಕ ರಾಜ್ಯ ಪೊಲೀಸ್‌ಮಹಾ ನಿರ್ದೇಶಕ ಡಾ. ಎಂ.ಎ.ಸಲೀಂ ಐಪಿಎಸ್ ಸುಧಾರಾಣಿ ಟಿ.ಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. 

2021ರಲ್ಲಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಸೇವೆ ಆರಂಭಿಸಿದ್ದ ಸುಧಾರಾಣಿ ಟಿ. ಅವರು ಪ್ರಸ್ತುತ ಅಮಾಸೆಬೈಲು ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉಡುಪಿ ಎಸ್ಪಿ ಹರಿರಾಂ ಶಂಕರ್ ಹಾಗೂ ಇಲಾಖಾ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ


Aware others:

Leave a Reply

Your email address will not be published. Required fields are marked *

error: Content is protected !!