BlogCulturalEconomyEntertainmentFashionHighlightsHuman storiesLifestyleLocal newsTop StoriesTrendingWomen Care

ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಶ್ಲಾಘನೀಯ- ಗುಂಡ್ಮಿ -ಅಣ್ಣಾಜಿ ಬಲ್ಲಾಳ ಸ್ಮಾರಕ ಬಾಲ ಪುರಸ್ಕಾರ ಪ್ರದಾನದಲ್ಲಿ ರವೀಂದ್ರ ಕೋಟ

Aware others:

ಕೋಟ: ಮಕ್ಕಳ ಪ್ರಾಥಮಿಕ ಹಂತದಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಕಾರ್ಯ ನಿಜಕ್ಕೂ ಶ್ಲಾಘನೀಯ.  ಡಾ.ಅಣ್ಣಾಜೀ ಬಲ್ಲಾಳರ ಹೆಸರಿನಲ್ಲಿ ಕೊಡ ಮಾಡುವ ಸಾಹಿತ್ಯಿಕ ಪ್ರಶಸ್ತಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕವಾಗಿ ಮುನ್ನುಡಿ ಬರೆಯಲಿದೆ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು. ಶನಿವಾರ ಗುಂಡ್ಮಿ ವೇ.ಮೂ. ಸತ್ಯನಾರಾಯಣ ಉಪಾಧ್ಯಾಯ ಮನೆಯಂಗಳದಲ್ಲಿ ಸಾಲಿಗ್ರಾಮದ ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ,ಸಾಹಿತ್ಯ ಸಂಘ ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ ಇವರ ಆಶ್ರಯದಲ್ಲಿ ವರ್ಷ ಸಂಭ್ರಮ – ಕೃತಿ ಬಿಡುಗಡೆ ಮತ್ತು ಅಂಬಲಪಾಡಿ ಡಾ.ನಿ.ವಿಜಯ  ಬಲ್ಲಾಳರು ತಮ್ಮ ತಂದೆಯ ನೆನಪಿನಲ್ಲಿ  ಸಾಹಿತ್ಯ ಕೃಷಿಗಾಗಿ ಕೊಡಮಾಡುತ್ತಿರುವ 17ನೇ  ವರ್ಷದ ಅಣ್ಣಾಜಿ ಬಲ್ಲಾಳ ಸ್ಮಾರಕ ಬಾಲ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅವನಿ ಹೊಳ್ಳ ಇವರಿಗೆ ಅಣ್ಣಾಜೀ ಬಲ್ಲಾಳ ಬಾಲ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇ.ಮೂ ಸತ್ಯನಾರಾಯಣ ಉಪಾಧ್ಯಾಯ  ಉದ್ಘಾಟಿಸಿದರು. ಕುಮಾರಿ ಅವನಿ ಹೊಳ್ಳ ರಚಿಸಿದ ಕವನ ಸಂಕಲ ಮನದ ಮಾತು ಕೃತಿಯನ್ನು ವಿವೇಕ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ಬಿಡುಗಡೆಗೊಳಿಸಿ ಶುಭಹಾರೈಸಿದರು. 

ವಿವೇಕ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿ ಅನಘ ಹೊಳ್ಳ ವರ್ಷ ಸಂಭ್ರಮದ ಅಧ್ಯಕ್ಷತೆ ವಹಿಸಿದರು. ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಪ್ರೋ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅಣ್ಣಾಜಿ ಬಲ್ಲಾಳ್ ಪುರಸ್ಕಾರ ಸಭೆಯ ಅಧ್ಯಕ್ಷತೆ ವಹಿಸಿ ಸಭೆಯನ್ನು ನಿರ್ವಹಿಸಿದರು. ಕೋಟ ವಿವೇಕ ಬಾಲಕಿಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರೇಮಾನಂದ, ಅವನಿ ಹೊಳ್ಳ ಪೋಷಕರಾದ ಮಂಜುನಾಥ ಹೊಳ್ಳ ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ಸಂಘಟಕಿ ಮಹಾಲಕ್ಷ್ಮೀ ಸೋಮಯಾಜಿ ಸ್ವಾಗತಿಸಿ, ಕೋಟದ ವಿವೇಕ ಪ್ರೌಢಶಾಲಾ ವಿದ್ಯಾರ್ಥಿನಿ ಸೃಷ್ಠಿ ಆರ್ ನಿರೂಪಿಸಿದರು. ಕನ್ನಡ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ನಿಲಾವರ ಸುರೇಂದ್ರ ಅಡಿಗ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!