ನಾಡೋಜ ಡಾ.ಜಿ ಶಂಕರ್ ಸಮಾಜಕ್ಕೆ ಸ್ಪೂರ್ತಿ – ರಘು ಮಧ್ಯಸ್ಥ
ಪಂಚವರ್ಣ ಸಂಘಟನೆಯ 320ನೇ ಭಾನುವಾರ ಪಾರಂಪಳ್ಳಿ ಬೀಚ್ ಕ್ಲಿನಿಂಗ್ ಅಭಿಯಾನ
ಕೋಟ: ಸಮಾಜಕ್ಕೆ ತನ್ನದೆ ಆದ ಕೊಡುಗೆಗಳನ್ನು ನೀಡುತಾ ಸಮುದಾಯಗಳ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿರುವ ನಾಡೋಜ ಡಾ.ಜಿ ಶಂಕರ್ ಈ ಸಮಾಜದ ಆಸ್ತಿಯಾಗಿ ಹೊರಹೊಮ್ಮಿದ್ದಾರೆ. ಅಂತಹ ಮಹಾನ್ ಶಕ್ತಿಯ ಹೆಸರನಲ್ಲಿ ಪಂಚವರ್ಣ ಸಂಘಟನೆ ಬೀಚ್ ಅಭಿಯಾನ ಶ್ಲಾಘನೀಯ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಪಾರಂಪಳ್ಳಿ ರಘು ಮಧ್ಯಸ್ಥ ಹೇಳಿದರು.

ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಇವರ ಸಹಯೋಗದೊಂದಿಗೆ ನಾಡೋಜ ಡಾ.ಜಿ ಶಂಕರ್ ಹುಟ್ಟುಹಬ್ಬಕ್ಕೆ ಸಲ್ಲಿಸಲಾದ 320ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಂಚವರ್ಣ ಸಂಘಟನೆ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ ಪೂಜಾರಿ, ಪಟ್ಟಣ ಪಂಚಾಯತ್ ಆರೋಗ್ಯ ನಿರೀಕ್ಷಕಿ ಮಮತಾ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿ, ರವೀಂದ್ರ ಕೋಟ ಸಂಯೋಜಿಸಿದರು. ಅಭಿಯಾನದಲ್ಲಿ ಸುಮಾರು 400 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
