ಮಾರ್ಚ್ 1 : ಕೋಟ ಅಮೃತೇಶ್ವರೀ ದೇಗುಲದಲ್ಲಿ ನಾಗಮಂಡಲೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ
ಕೋಟ/ಕುಂದಾಪುರ: ಇಲ್ಲಿನ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವತಿಯಿಂದ ಮಾರ್ಚ್ 1ರಂದು ನಡೆಯಲಿರುವ ಏಕ: ಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಬುಧವಾರ ದೇಗುಲದಲ್ಲಿ ಬಿಡುಗಡೆಗೊಳಿಸಲಾಯಿತು.

ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್ ಅವರು, ನಾಗದೇವರರಿಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ದೇವಿ ಅಮೃತೇಶ್ವರೀ ದೇವಿ, ಪರಿವಾರ ದೇವರುಗಳಾದ ಮಾರಿಯಮ್ಮ,ರಕ್ತೇಶ್ವರಿ, ವೀರಭದ್ರ,ಬೊಬ್ಬರ್ಯ ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಏಕ: ಪವಿತ್ರ ನಾಗಮಂಡಲದ ಕುರಿತಂತೆ ದೇಗುಲದಲ್ಲಿ ಈ ಬಗ್ಗೆ ಪೂರ್ವಭಾವಿ ಸಭೆ ನಡೆಸಿ ಗ್ರಾಮಸ್ಥರಿಂದ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ದೇಗುಲದ ಟ್ರಸ್ಟಿಗಳಾದ ರತನ್ ಐತಾಳ್, ಶಿವ ಪೂಜಾರಿ,ಸುಧಾ ಎ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ ಗಿಳಿಯಾರು, ಜ್ಯೋತಿ ಡಿ.ಕಾಂಚನ್, ಸುಬ್ರಾಯ ಜೋಗಿ, ಹರ್ತಟ್ಟು ಶಿರಸಿ ದೇವಿ ದೇಗುಲದ ಮಂಜುನಾಥ್ ಪೂಜಾರಿ, ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ಟ್ರಸ್ಟಿ ಭಾಸ್ಕರ ಶೆಟ್ಟಿ, ಹೊನ್ನಾರಿ ಬೊಬ್ಬರ್ಯ ದೈವಸ್ಥಾನದ ಪ್ರಧಾನ ಅರ್ಚಕ ಮಹಾಬಲ ಹೇರ್ಳೆ, ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ದೇಗುಲದ ಮಾಜಿ ಟ್ರಸ್ಟಿ ಚಂದ್ರ ಪೂಜಾರಿ,ಸುಬ್ರಾಯ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ದೇಗುಲದ ಟ್ರಸ್ಟಿ ಚಂದ್ರ ಆಚಾರ್ ನಿರೂಪಿಸಿದರು.
