ಉಡುಪಿ: ಮೋಹನ್ಚಂದ್ರ ಕಾಳಾವರ್ಕರ್ ಗೆ ಪೊಲೀಸ್ ಸಲಹೆಗಾರ ಪ್ರಶಸ್ತಿ
ಕುಂದಾಪುರ: ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಕಡೆಯಿಂದ ನೀಡುವ ಅತ್ಯುತ್ತಮ ಪೊಲೀಸ್ ಸಲಹೆಗಾರರು ಹಾಗೂ ಪೊಲೀಸ್ ಸ್ನೇಹಿತ ಪ್ರಶಸ್ತಿಯು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಾಗಿರುವ ಕಂಡ್ಲೂರು ವ್ಯಾಪ್ತಿಯ ಕಾಳಾವರ ಗ್ರಾಮದ ಬಿ. ಮೋಹನ್ ಚಂದ್ರ ಕಾಳಾವರ್ ಕಾರ್ ಅವರಿಗೆ ಲಭಿಸಿದೆ.

ಈ ಪ್ರಶಸ್ತಿ ಯನ್ನು ಸಮುದಾಯದಲ್ಲಿ ಪೊಲೀಸ್ ವ್ಯವಸ್ಥೆ ಬಲಪಡಿಸುವ ಹಾಗೂ ಸೇವಾಭಾವ, ಪರಿಶ್ರಮ, ಸಹಕಾರ, ಸಲಹೆ ಗಳನ್ನು ಮೆಚ್ಚಿ ಈ ಪ್ರಶಸ್ತಿ ನೀಡಲಾಗಿದೆ.

ಕಾಳಾವರದ ಪ್ರಗತಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ಕಾರ್ಯದರ್ಶಿ, ಸಮಾಜ ಸೇವಕ, ಅಬ್ದುಲ್ ನಜೀರ್ ಸಾಬ್ ಸಂಸ್ಥೆಯ ರಾಜ್ಯಮಟ್ಟದ ತರಬೇತುದಾರರಾಗಿರುವ ಮೋಹನಚಂದ್ರ ಕಾಳಾವರ್ಕರ್ ಅವರಿಗೆ ಗಣರಾಜ್ಯೋತ್ಸವ ದಿನದಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಜಿಲ್ಲಾ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
