BlogCulturalEconomyEducationEntertainmentFashionHighlightsHuman storiesLifestyleLocal newsOthersTop StoriesTrendingWomen Care

ಸಿದ್ಧಾಪುರ: ಜ್ಞಾನಸರಸ್ವತಿಯಲ್ಲಿ  ಅಕ್ಷರಾಭ್ಯಾಸ

Aware others:

ಸಿದ್ಧಾಪುರ: ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳು, ಜ್ಞಾನಸರಸ್ವತಿ ಸಿ.ಬಿ.ಎಸ್.ಇ ಶಾಲೆ, ಸರಸ್ವತಿ ವಿದ್ಯಾಲಯದ  ನರ್ಸರಿ ಮತ್ತು ಕೆಜಿ ವಿದ್ಯಾರ್ಥಿಗಳಿಗೆ ಪುಟಾಣಿಗಳ ಅಕ್ಷರಾಭ್ಯಾಸ  ಕಾರ್ಯಕ್ರಮ ಸೋಮವಾರ ನಡೆಯಿತು.

ಪುರೋಹಿತ ಸೂರಜ್ ಆಚಾರ್ಯರವರು ಅಕ್ಷರಾಭ್ಯಾಸ ಕಾರ್ಯಕ್ರಮದ ಪೂಜಾ ವಿದಿ ವಿಧಾನಗಳನ್ನು  ನೆರವೇರಿಸಿದರು. ಪುಟಾಣಿಗಳ ಪೋಷಕರೆಲ್ಲರು ಅಕ್ಷರಾಭ್ಯಾಸದಲ್ಲಿ  ಭಾಗವಹಿಸಿದ್ದರು. ಪುರೋಹಿತರಾದ ಸೂರಜ್ ಆಚಾರ್ಯ ಅವರ ಸಲಹೆಯ ಮೇರೆಗೆ ಪೋಷಕರ ಮೂಲಕ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿಧಿವತ್ತಾಗಿ  ಅಕ್ಷರಾಭ್ಯಾಸ ಮಾಡಿಸಲಾಯಿತು. ಬಳಿಕ ಸೂರಜ್ ಆಚಾರ್ಯರವರು ಹಿಂದೂಧರ್ಮದ ಪ್ರಕಾರ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಪ್ರಾಮುಖ್ಯತೆ ಬಗ್ಗೆ  ತಿಳಿಸಿದರು.

 ಈ ಕಾರ್ಯಕ್ರಮದಲ್ಲಿ  ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ, ಉಪ ಪ್ರಾಂಶುಪಾಲ ಹರ್ಷ ಶೆಟ್ಟಿ ಆಜ್ರಿ ಮತ್ತು ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತ ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!