ಕೋಟ: ಅಮೃತೇಶ್ವರಿ ತಾಯಿ ದರ್ಶನ ಪಡೆದ ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ
ಕುಂದಾಪುರ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಕಾರ್ಯಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರದ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಆಪ್ತ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿ ರಾಜಶೇಖರ ಮೆಣಸಿನಕಾಯಿ ಅವರು ಭಾನುವಾರ ಕೋಟದ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಈ ಸಂದರ್ಭ ರಾಜಶೇಖರ್ ಮೆಣಸಿನಕಾಯಿ ಜೊತೆಗೆ ಕೆಪಿಸಿಸಿ ಪದಾಧಿಕಾರಿ, ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ರಾಜ್ಯಾಧ್ಯಕ್ಷ ಬಂಗಾರೇಶ್ ಹಿರೇಮಠ್, ಕೆಪಿಸಿಸಿ ಪದಾಧಿಕಾರಿ ಸುರೇಶ ಸವಣೂರ, ಬಾಂಡ್ ಉದ್ಯಮಿ ರಫೀಕ್ ದೊಡ್ಡಮನಿ ದೇವೀ ದರ್ಶನ ಪಡೆದರು.
ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ಅವರು ಮೂವರಿಗೂ ಶಾಲು ಹೊದಿಸಿ ಅಮ್ಮನವರ ಪ್ರಸಾದವನ್ನು ನೀಡಿ ಗೌರವಿಸಿ ಸನ್ಮಾನಿಸಿದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಬ್ರಾಯ ಜೋಗಿ, ಸುಧಾ ಎ ಪೂಜಾರಿ, ಸುಭಾಸ್ ಶೆಟ್ಟಿ, ಗಣೇಶ್ ಕೆ ನೆಲ್ಲಿಬೆಟ್ಟು, ಜ್ಯೋತಿ ಡಿ ಕಾಂಚನ್, ರತನ್ ಐತಾಳ್ ಹಾಗೂ ಕಾಂಗ್ರೆಸ್ ಮುಖಂಡರಾದ ಉಣಕಲ್ ಪ್ರಕಾಶ್ ಶೆಟ್ಟಿ, ಅಪ್ಪಣ್ಣ ಕಮ್ಮಾರ, ಸೂರ್ಯಕಾಂತ್ ಗೋಡ್ಕೆರವರು ಹಾಗೂ ದೇವಸ್ಥಾನದ ಸಿಬ್ಬಂದಿ ಗಣೇಶ್ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.