ಪಡುಬಿದ್ರಿ: ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ
ಪಡುಬಿದ್ರಿ: ಇಲ್ಲಿನ ಬಡಾ ಗ್ರಾಮದ ಉಚ್ಚಿಲ ಪೊಲ್ಯ ಬುಬಲ್ ಮೈದಾನದ ಬಳಿ ಡ್ರಗ್ಸ್ ಮಾರಾಟ ಮಾಡಲೆತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಪು ತಾಲೂಕಿನ ಮಲ್ಲಾರು ಗ್ರಾಮದ ಫಕೀರನಕಟ್ಟೆ ಮಸೀದಿ ಬಳಿಯ ನಿವಾಸಿ ಫರ್ಹನ್ ಹಾಗೂ ಮಜೂರು ಗ್ರಾಮದ ಕೊಂಬಗುಡ್ಡೆ, ಮಲ್ಲಾರು, ಮೊಹಮ್ಮದ್ ಹಾಶಿಂ ಎಂದು ಗುರುತಿಸಲಾಗಿದೆ.

ಪಡುಬಿದ್ರಿ ಸಬ್ ಇನ್ಸ್ಪೆಕ್ಟರ್ ಸಕ್ತಿವೇಲು ಅವರಿಗೆ ಬಂದ ಮಾಹಿತಿಯಂತೆ ದಾಳಿ ನಡೆಸಿದಾಗ ಆರೋಪಿತರು ಒಂದು ಬೈಕಿನ ಪಕ್ಕ ನಿಂತುಕೊಂಡಿದ್ದು, ಪರಿಶೀಲಿಸಿದಾಗ ಅವರ ಪ್ಯಾಂಟಿನ ಕಿಸೆಯಲ್ಲಿ 9.30 ಗ್ರಾಂ ತೂಕದ ಎಂಡಿಎಂಎ (ಡ್ರಗ್ಸ್) ಮಾದಕ ವಸ್ತು, ಐದು ಸಾವಿರ ನಗದು ಹಣ, ಪತ್ತೆಯಾಗಿದೆ. ಆರೋಪಿತರ ಬಳಿಯಿದ್ದ ಒಂದು ಲಕ್ಷದ ಎಂಭತ್ತು ಸಾವಿರ ಮೌಲ್ಯದ ಬೈಕ್, ಆರು ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾI ಹರ್ಷ ಪ್ರಿಯಂವಧ ಮಾರ್ಗದರ್ಶನದಂತೆ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ರವರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕ ಸಕ್ತಿವೇಲು ಇ ಮತ್ತು ಅನಿಲ್ ಕುಮಾರ್, ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಎ ಎಸ್ ಐ ಗಿರೀಶ್ ಹೆಡ್ ಕಾನ್ಸ್ಟೇಬಲ್ ಕೃಷ್ಣಪ್ರಸಾದ್, ರಮೇಶ್, ಕಾನ್ಸ್ಟೇಬಲ್ ಸಂದೇಶ, ಮಹಿಳಾ ಕಾನ್ಸ್ಟೇಬಲ್ ರುಕ್ಮಿಣಿ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
