BlogEconomyEntertainmentFashionGovernmentHighlightsHuman storiesLifestyleLocal newsOthersTop StoriesTrending

ಉಡುಪಿ: ಜಿಲ್ಲಾ ಪೊಲೀಸ್ ನೌಕರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Aware others:

ಉಡುಪಿ: ಜಿಲ್ಲಾ ಪೊಲೀಸ್ ನೌಕರರ ಸಹಕಾರ ಸಂಘ(ನಿ.) ಇದರ ವಾರ್ಷಿಕ ಮಹಾಸಭೆಯು ಶುಕ್ರವಾರ ಉಎಉಪಿ ಜಿಲ್ಲಾ ಪೊಲೀಸ್‌ ಕಛೇರಿಯ ಸೆಂಟಿನಲ್ ಹಾಲ್ ನಲ್ಲಿ ನಡೆಯಿತು.

ಸಭೆಯಲ್ಲಿ ಸಂಘದ 2024-25 ನೇ ವರ್ಷದಲ್ಲಿ ಸದಸ್ಯರಿಗೆ 14% ಡಿವಿಡೆಂಡ್ ನ್ನು ಅಧ್ಯಕ್ಷರು ಫೋಷಿಸಿದರು. ಇದೇ ಸಂದರ್ಭ ಎಸ್.‌ ಎಸ್.‌ ಎಲ್.‌ ಸಿ. ಹಾಗೂ ಪಿ.ಯು.ಸಿ. ಯಲ್ಲಿ 85% ಗಿಂತ ಅಧಿಕ ಅಂಕ ಗಳಿಸಿದ 52 ಸದಸ್ಯರ ಮಕ್ಕಳಿಗೆ ಎಸ್ಪಿ ಹರಿರಾಂ ಶಂಕರ್ ವಿದ್ಯಾರ್ಥಿವೇತನ ವಿತರಿಸಿದರು. 

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗು ಸಂಘದ ಅಧ್ಯಕ್ಷ ಸುಧಾಕರ ಎಸ್‌. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಗೌಡ ಜಿ. ಡಿ.ವೈ.ಎಸ್.ಪಿ.(ಸಶಸ್ತ್ರ) ಹಾಗೂ ಸಂಘದ ಎಲ್ಲಾ ನಿರ್ದೇಶಕರು ಹಾಜರಿದ್ದರು.

ಉದಯಕುಮಾರ್ ಪ್ರಾರ್ಥಿಸಿದರು, ರಾಘವೇಂದ್ರ ದೇವಾಡಿಗ ಸ್ವಾಗತಿಸಿದರು. ಸಂಘದ ಖಾಸಗಿ ಕಾರ್ಯದರ್ಶಿ, ಜಯಶೀಲ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು, ಶಿವಾನಂದ ಬಿ. ಇವರು ವಂದಸಿದರು. ಯೋಗೇಶ್‌ ನಾಯ್ಕ್ ನಿರೂಪಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!