ಕುಂದಾಪುರ: ಬೈಕ್ ಸ್ಕಿಡ್: ಬೆಂಗಳೂರು ಮೂಲದ ಸವಾರ ಗಂಭೀರ!
ಕುಂದಾಪುರ: ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲ್ಲೂರು – ಜಾಲಾಡಿ ನಡುವಿನ ಎಂಬಾಕ್ ಮೆಂಟ್ ನಲ್ಲಿ ಸೋಮವಾರ ಸಂಜೆ 6.10ರ ಸಮಯ ನಡೆದಿದೆ. ಗಂಭೀರ ಗಾಯಗೊಂಡ ಸವಾರ ಅಂದಾಜು 50-55ವರ್ಷದವರಾಗಿದ್ದು, ಬೆಂಗಳೂರು ಮೂಲದವರೆಂದು ಅಂದಾಜಿಸಲಾಗಿದೆ.


ಬೆಂಗಳೂರು ನೋಂದಣಿಯ ಕೆಎ09ಇ 8394 ಯಮಾಹಾ ಅರ್ ಎಕ್ಸ್ 100 ಬೈಕಿನಲ್ಲಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದರು.


ಸಂಜೆ ಮಳೆ ಬಂದಿದ್ದರಿಂದ ಬೈಕ್ ಸ್ಕಿಡ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದು, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ತಕ್ಷಣ ಸ್ಪಂದಿಸಿ ಗಾಯಾಳು ಬೈಕ್ ಸವಾರನನ್ನು ಅಂಬ್ಯುಲನ್ಸ್ ತರಿಸಿ ಆಸ್ಪತ್ರೆಗೆ ಕಳಿಸಿದ್ದಾರೆ. ಸವಾರ ಗಂಭೀರ ಗಾಯಗೊಂಡಿದ್ದಾನೆ. ಹೆಚ್ಚಿನ ವಿವರ ತಿಳಿದುಬರಬೇಕಿದೆ.