BlogAgricultureCrime newsEconomyEducationEntertainmentFashionHighlightsHuman storiesLifestyleLocal newsOthersTop StoriesTrending

ರೈಫಲ್ ಗೆ ಟೆಲೆಸ್ಕೋಪ್ ಅಳವಡಿಕೆ : ಎರಡು ಪ್ರತ್ಯೇಕ ಪ್ರಕರಣ ದಾಖಲು

Aware others:

ಕುಂದಾಪುರ: ಕೃಷಿ ರಕ್ಷಣೆಗಾಗಿ ಪಡೆದುಕೊಂಡ ರೈಫಲ್ ಪರವಾನಿಗೆಯಡಿಯಲ್ಲಿ ಖರೀದಿಸಿದ ರೈಫಲ್ ಗಳಿಗೆ ಯಾವುದೇ ಅನುಮತಿ ಪಡೆಯದೇ ಟೆಲಿಸ್ಕೋಪ್ ಅಳವಡಿಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಪರವಾನಿಗೆದಾರರ ವಿರುದ್ಧ ಎಫೈರ್ ದಾಖಲಿಸಿಕೊಂಡಿದ್ದಾರೆ.

ಕೋವಿ ಪರವಾನಿಗೆದಾರರು ಆಯುಧಗಳನ್ನು ಪರಿಶೀಲನೆಗಾಗಿ ಆಯಾ ಪೊಲೀಸ್ ಠಾಣೆಗಳಲ್ಲಿ ಡೆಪಾಸಿಟ್ ಇರಿಸಿದ್ದು, ಈ ಸಂದರ್ಭ ಪರಿಶೀಲನೆ ವೇಳೆ ಅಕ್ರಮ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂದಾಪುರ ತಾಲೂಕು, ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಒಲಿಕಲ್ ನಿವಾಸಿ, ಫೆಡ್ರಿಕ್ ಡಿ’ಕ್ರೂಸ್ ಎಂಬುವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೆ, ಕುಂದಾಪುರ ತಾಲೂಕು ಉಳ್ಳೂರು-74 ಗ್ರಾಮ, ಚಾಂಗೂರು, ಸುರೇಶ ನಿಲಯ ನಿವಾಸಿ ಸುರೇಶ್ ಕುಮಾರ್ ಶೆಟ್ಟಿ ಎಂಬುವರ ವಿರುದ್ಧ ಶಂಕರನಾರಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!