ಪರಿಸರ ಪ್ರಿಯ ಪತ್ರಕರ್ತಗೆ ಗಿಡನೆಟ್ಟು ಹುಟ್ಟುಹಬ್ಬದ ಶುಭಾಶಯ – ರವೀಂದ್ರ ಕೋಟ ಅಭಿಮಾನಿಗಳಿಂದ ಸ್ಪೆಷಲ್ ಗಿಫ್ಟ್!
ಕುಂದಾಪುರ: ಸಾಮಾನ್ಯವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವವರು ಕೇಕ್ ಕತ್ತರಿಸಿ, ಬಂಧು ಮಿತ್ರರಿಗೆ ಹಂಚಿ ಸಂಭ್ರಮಿಸಿಕೊಳ್ಳುತ್ತಾರೆ. ಇನ್ನು ಕೆಲವರು ಸ್ವತಃ ಗಿಡ ನೆಟ್ಟು ಬರ್ತ್ ಡೇ ಆಚರಿಸಿಕೊಳ್ತಾರೆ, ಇನ್ನು ಕೆಲವರು ಪಾರ್ಟಿ ಮಾಡಿ ಸಂಭ್ರಮಪಡ್ತಾರೆ.


ಆದರೆ, ಕೋಟದ ಪತ್ರಕರ್ತ ರವೀಂದ್ರ ಕೋಟ ಹುಟ್ಟುಹಬ್ವಕ್ಕೆ ಅವರ ಸ್ನೇಹಿತರು ತಮ್ಮ ಮನೆಯ ಮುಂದೆ ಗಿಡ ನೆಡುವುದರ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.



ರವೀಂದ್ರ ಕೋಟ ಅವರು ಪಂಚವರ್ಣ ಗೆಳೆಯರ ಬಳಗದ ಮೂಲಕ ಸಾವಿರಾರು ಗಿಡ ನೆಟ್ಟಿದ್ದಾರೆ, ಪರಿಸರ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಬೀಚ್ ಸ್ವಚ್ಚತಾ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಪ್ರತೀ ಭಾನುವಾರ ಗಿಡ ನೆಡುವ ಮೂಲಕ ಹಸಿರು ಅಭಿಯಾನ ನಡೆಸುತ್ತಿದ್ದಾರೆ.



ವೃತ್ತಿಯಲ್ಲಿ ಪತ್ರಕರ್ತರಾಗಿರುವ ರವೀಂದ್ರ ಕೋಟ ಅವರ ಹುಟ್ಟುಹಬ್ಬಕ್ಕೆ ಅಭಿಮಾನಗಳು ಗಿಡನೆಟ್ಟು ಶುಭಹಾರೈಸಿರುವುದು ಒಂದು ವಿನೂತನ ಮಾದರಿಯಾಗಿದೆ ಎಂದು ಉದ್ಯಮಿ, ಶ್ರೀ ಕೃಷ್ಣಪಸಾದ್ ಗ್ರೂಪ್ ಆಫ್ ಇಂಡಸ್ರ್ಟೀಸ್ ಮಾಲಕ ಸಂಪತ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಅಲ್ಲದೇ ಸ್ವತಃ ಅವರೂ ಕೂಡಾ ಗಿಡ ನೆಟ್ಟು ಶುಭಾಶಯ ಕೋರಿದ್ದಾರೆ.


ರವೀಂದ್ರ ಕೋಟ ಅವರ ಪರಿಸರ ಕಾಳಜಿಗೆ ಅವರ ಅಭಿಮಾನಿಗಳು ತಮ್ಮ ತಮ್ಮ ಮನೆಯ ಮುಂಭಾಗದಲ್ಲಿ ಗಿಡನೆಟ್ಟು ಕೊಟ್ಟ ಉಡುಗೊರೆ, ಶುಭ ಹಾರೈಕೆಗಳು ಎಲ್ಲೆಡೆ ಟ್ರೆಂಡ್ ಆದರೆ ಮುಂದಿನ ದಿನಗಳಲ್ಲಿ ಪರಿಸರ ಉಳಿಸುವ ನೈಜ ಕಳಕಳಿ ನನಸಾಗಬಹುದು.
