Crime newsEntertainmentFashionHighlightsHuman storiesLifestyleLocal newsOthersSuccess storiesTop StoriesTrending

ಚಿತ್ತೂರು: ಮಧ್ಯರಾತ್ರಿ ಕಾರಿನಲ್ಲಿ ಬಂದು ದನ ಕಳವು ಫ್ರಕರಣ : ಕಾರು ಸಹಿತ ಒಬ್ಬನ ಬಂಧನ

Aware others:

ಕುಂದಾಪುರ: ಸೆಪ್ಟಂಬರ್ 29ರ ತಡರಾತ್ರಿಯಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ದನವನ್ನು ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗಿರುವ ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸರು ಒಬ್ಬ ಆರೋಪಿಯನ್ನು ಕೃತ್ಯಕ್ಕೆ ಬಳಸಿದ ಕಾರಿನ ಸಮೇತ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ತೋಟದ ಮನೆ ನಿವಾಸಿ ಮೊಹಮ್ಮದ್‌ ಸಿನಾನ್‌(20) ಎಂದು ಗುರುತಿಸಲಾಗಿದೆ.

ಸೆಪ್ಟಂಬರ್ 29ರಂದು ತಡರಾತ್ರಿ 1.30ರ ನಸುಕಿನಲ್ಲಿ ಚಿತ್ತೂರು ಗ್ರಾಮದ ಮಾರಣಕಟ್ಟೆ ರಸ್ತೆಯಲ್ಲಿ ಜೋರಾಗಿ ನಾಯಿ ಬೊಗಳುತ್ತಿರುವ ಸದ್ದು ಕೇಳಿದಾಗ ಶ್ರೀನಿವಾಸ ಮಂಜ(52) ಎಂಬುವರು ಎದ್ದು ಹೊರಬಂದು ನೋಡಿದಾಗ ಯಾರೋ 3 ಜನ ದನ ಕಳ್ಳರು ರಸ್ತೆಯ ಬದಿಯಲ್ಲಿದ್ದ ದನವನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ದನವೊಂದನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗಿರುವುದು ತಿಳಿದುಬಂದಿದ್ದು, ಕೊಲ್ಲೂರು ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದ ಬೆನ್ನತ್ತಿದ ಪೊಲೀಸರು ಕುಂದಾಪುರ ಡಿವೈಎಸ್ಪಿ ಹೆಚ್‌ ಡಿ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ ರವರ ಉಸ್ತುವಾರಿಯಲ್ಲಿ ಕೊಲ್ಲೂರು ಪೊಲೀಸ್‌ ಠಾಣಾ ಉಪ ನಿರೀಕ್ಷಕರಾದ ವಿನಯ್‌ ಎಮ್‌ ಕೊರ್ಲಹಳ್ಳಿ ಹಾಗೂ ಅವರ ತಂಡದ ಕೊಲ್ಲೂರು ಠಾಣಾ ಸಿಬ್ಬಂದಿಗಳಾದ ಹೆಚ್‌ಸಿ ನಾಗೇಂದ್ರ, ಸಿಪಿಸಿ ರುದ್ರೇಶ, ಸಿಪಿಸಿ ನವೀನ್‌ ಕುಮಾರ್‌, ಸಿಪಿಸಿ ವಿಲಾಸ್‌ ರಾಠೋಡ, ಸಿಪಿಸಿ ನಾಗರಾಜ ರವರು ಕೃತ್ಯಕ್ಕೆ ಬಳಸಿದ ವಾಹನ ಮತ್ತು ಪ್ರಮುಖ ಆರೋಪಿ ಮೊಹಮ್ಮದ್‌ ಸಿನಾನ್‌ ಎಂಬಾತನನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನ ವಿರುದ್ಧ ಕುಂದಾಪುರ ಉಪ ವಿಭಾಗದ ಇತರೆ ರಾಣಿಗಳಲ್ಲಿ ಒಟ್ಟು ಐದು ದನ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಇನ್ನಿಬ್ಬರು ಭಾಗಿಯಾಗಿದ್ದು ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!