BlogEconomyEducationEntertainmentFashionGovernmentHighlightsHuman storiesLifestyleLocal newsOthersState newsSuccess storiesTop StoriesTrending

*ಕೋಟ: ವಿಶೈನ್ ನಿಂದ ಉಚಿತ ತರಬೇತಿ ಕಾರ್ಯಾಗಾರಗಳು ನಡೆಯುತ್ತಿರುವುದು ಶ್ಲಾಘನೀಯ -ಸಂಸದ ಕೋಟ ಶ್ರೀನಿವಾಸ ಪೂಜಾರಿ | ಶಿಕ್ಷಕರ ಹುದ್ದೆಯ ಪರೀಕ್ಷಾ ಪೂರ್ವಸಿದ್ಧತಾ ಉಚಿತ ತರಬೇತಿ ಕಾರ್ಯಾಗಾರ ಸಮಾರೋಪ*

Aware others:

ಕೋಟ: ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿಗಳು ಪರೀಕ್ಷೆಯನ್ನು ಎದುರಿಸಲು ಅಭ್ಯರ್ಥಿಗಳಿಗೆ ನೈತಿಕ ಶಕ್ತಿಯನ್ನು ನೀಡುತ್ತವೆ. ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರದಲ್ಲಿ ನೇರ ನೇಮಕಾತಿ ಹಾಗೂ ಸಂದರ್ಶನ ಎಂಬ ಎರಡು ನಿಯಮಗಳಿವೆ. ಇದರ ಜೊತೆಗೆ ಸಂದರ್ಶನ ಎನ್ನುವ ತಂತ್ರಗಾರಿಕೆಯೂ ಇದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರು ಸಂದರ್ಶನದಲ್ಲಿ ಹೆಚ್ಚು ಅಂಕ ಪಡೆದು ಆಯ್ಕೆಯಯಾಗುವ ಘಟನೆಗಳೂ ನಡೆಯುತ್ತವೆ. ಆದರೆ ನ್ಯಾಯಲಯಗಳು ತಡೆಯಾಜ್ಞೆ ನೀಡದೇ ಇರುವ ಒಂದೇ ಒಂದು ನಿಯಮ ಎಂದರೆ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳಿಗೆ ಮೆರಿಟ್ ಹಾಗೂ ರೋಸ್ಟರ್ ಪದ್ದತಿಯಲ್ಲಿ ನೇಮಕಾತಿ ಮಾಡುವುದು. ಮೆರಿಟ್ ಇದ್ದೂ ಪರೀಕ್ಷಾ ಪೂರ್ವ ಸಿದ್ಧತೆಗಳಿಲ್ಲದಿದ್ದರೆ ಅಭ್ಯರ್ಥಿಗಳ ಆಯ್ಕೆಗೆ ತೊಡಕಾಗುತ್ತದೆ. ಆ ನಿಟ್ಟಿನಲ್ಲಿ ವಿಶೈನ್ ಕೋಚಿಂಗ್ ಸೆಂಟರ್ ಉಚಿತ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಭಾನುವಾರ ಸಂಜೆ ಕೋಟದ ಶಿವರಾಮ ಕಾರಂತ ಥೀಂ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾದ ಶಿಕ್ಷಕ ಹುದ್ದೆಗಳ ಅಭ್ಯರ್ಥಿಗಳಿಗೆ ಉಚಿತ ಪರೀಕ್ಷಾ ಪೂರ್ವಸಿದ್ಧತಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ, ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿ ಶೈನ್ ಕೋಚಿಂಗ್ ಸೆಂಟರ್ ಉಚಿತ ಕಾರ್ಯಾಗಾರಗಳನ್ನು ನಡೆಸುತ್ತಿದ್ದು, ಇದರಿಂದ ಪರೀಕ್ಷಾರ್ಥಿಗಳಿಗೆ ಗರಿಷ್ಟ ಅನುಕೂಲವಾಗಿದೆ. ವಿಶೈನ್ ಸಂಸ್ಥೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಉದ್ಯಮಿ, ರಾಧಿಕಾ ಕ್ಯಾಶ್ಯೂಸ್ ಮಾಲಕ ಬೆಳ್ವೆ ಗಣೇಶ್ ಕಿಣಿ ಮಾತನಾಡಿ, ಮನುಷ್ಯ ಬದುಕಿರುವಷ್ಟು ಕಾಲ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ತುಡಿತವಿದ್ದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ. ಅಂತಹಾ ಕೆಲಸವನ್ನು ವಿಶೈನ್ ಕೋಚಿಂಗ್ ಸೆಂಟರ್ ಮಾಡುತ್ತಿದೆ ಎಂದು ಹೇಳಿದರು. ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್ ಮಾತನಾಡಿ, ಕಾನೂನಿನ ತೊಡಕುಗಳ ನಡುವೆಯೂ ಸರ್ಕಾರದ ನೇಮಕಾತಿ ಪ್ರಕ್ರಿಯೆಗಳಲ್ಲಿ ಭಾಗವಹಿಸಿ ಉದ್ಯೋಗ ಗಟಿಟ್ಟಿಸಿಕೊಳ್ಳುವಲ್ಲಿ ಪ್ರವೇಶ ಪರೀಕ್ಷೆಗಳು ಮಹತ್ವ ಪಡೆಯುತ್ತವೆ. ಆ ನಿಟ್ಟಿನಲ್ಲಿ ವಿಶೈನ್ ಕೋಚಿಂಗ್ ಸೆಂಟರ್ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು. ತಾಲೂಕು ಪಂಚಾಯತ್ ಬ್ರಹ್ಮಾವರ ಇದರ ಯೋಜನಾ ನಿರ್ದೇಶಕ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭ ತರಬೇರಿ ಸಂದರ್ಭ ನಡೆಸಲಾದ ಅಣುಕು ಪರೀಕ್ಷೆಯಲ್ಲಿ (ಮೋಕ್ ಟೆಸ್ಟ್) ಅತ್ಯಂತ ಗರಿಷ್ಟ ಅಂಕ ಪಡೆದ ಮಂಗಳೂರು ಗುರುಪುರದ ನೇಹಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಸಾದ್ ಬಿಲ್ಲವ ಸ್ವಾಗತಿಸಿದರು. ವಿವೇಕ ಅಮೀನ್ ವಂದಿಸಿದರು. ವಿಶೈನ್ ಕೋಚಿಂಗ್ ಸೆಂಟರ್ ನ ನಿರ್ದೇಶಕರಲ್ಲಿ ಒಬ್ಬರಾದ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಸಿ ಸ್ವಾಗತಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!