BlogCulturalEconomyEntertainmentFashionHighlightsHuman storiesLifestyleLocal newsOthersSportsSuccess storiesTop StoriesTrending

ರಂಗಕರ್ಮಿ ದಿನೇಶ್ ಅಮೀನ್ ಅವರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ

Aware others:

ಉಡುಪಿ: ಕನ್ನಡ ನಾಡಿಗೆ ತಮ್ಮ ವಿಶಿಷ್ಟ ಪ್ರತಿಭೆ, ಪರಿಶ್ರಮ, ಬದ್ಧತೆ ಹಾಗೂ ನಿರಂತರ ಸೇವೆಯ ಮೂಲಕ ಗಮನಾರ್ಹ ಸಾಧನೆ ಮಾಡಿದ್ದು, ಸಮಾಜಕ್ಕೆ ಹಾಗೂ ನಾಡಿಗೆ ತಮ್ಮದೇ ಆದ ಅಮೂಲ್ಯ ಕೊಡುಗೆಯನ್ನು ನೀಡಿರುವುದನ್ನು ಗುರುತಿಸಿದ ಸಿರಿಗನ್ನಡ ಫೌಂಡೇಶನ್ ಕರ್ನಾಟಕ ಸಂಸ್ಥೆಯು ಉಡುಪಿ ಜಿಲ್ಲೆಯ ರಂಗಕರ್ಮಿ ದಿನೇಶ್ ಅಮೀನ್ ಅವರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದೆ.

ಉಡುಪಿ ಜಿಲ್ಲೆಯ ಬಡಾನಿಡಿಯೂರಿನ ಕದಿಕೆಯವರರಾದ ದಿನೇಶ್ ಅಮೀನ್ ಅವರು ದಿವಂಗತ ಸೂರಪ್ಪ ಪಾಲನ್ ಹಾಗೂ ಸುಶೀಲ ಪೂಜಾರ್ತಿಯವರ ಪುತ್ರ. ಹಲವಾರು ರಂಗ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ನಟರಾಗಿ, ಮುಖವರ್ಣಿಕೆ ಕ್ಷೇತ್ರದಲ್ಲಿ ಹಾಗೂ ರಂಗಸಜ್ಜಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ದಿನೇಶ್ ಅಮೀನ್ ಅವರು, ರಂಗ ಭೂಮಿಯಲ್ಲಿ ಸುಮಾರು 32ವರ್ಷ ದಿಂದ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಲ್ಲಿ ಮೀನುಗಾರಿಕಾ ಏಜೆಂಟ್ ಆಗಿರುವ ದಿನೇಶ್ ಅಮೀನ್ ಅವರು ತೊಟ್ಟಮ್  ಶ್ರೀ ಗಜಾನನ ಯಕ್ಷಗಾನ ಕಲಾ ಸಂಘ ದಲ್ಲಿ 33 ವರ್ಷದಿಂದ ದೇವರ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ಸುಮಾರು 642 ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ 236 ಯಕ್ಷಗಾನದಲ್ಲಿ ಬಣ್ಣ ಹಚ್ಚಿದ್ದಾರೆ. ಎರಡು ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!