ರಾಜ್ಯಮಟ್ಟದ CISCE ಕಬಡ್ಡಿಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆ ಪ್ರಥಮ
ಹಟ್ಟಿಅಂಗಡಿ: ಬೆಂಗಳೂರಿನ ACTS ಸೆಕೆಂಡರಿ ಸ್ಕೂಲ್ ನಲ್ಲಿ ಆಗಸ್ಟ್ 21ರಂದು ನಡೆದ CISCE ರಾಜ್ಯಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಅಂಗಡಿಯ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿತು.

ಈ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ವಿದ್ಯಾರ್ಥಿಗಳಾದ ಈರಣ್ಣ ಕೆ.ಪಿ., ಸಿದ್ಧಾರ್ಥ ವೈ.ಸಿ., ಶಂಭು ಬಾಗಿ, ತನಿಷ್ಕಾ ವಿ.ಎಂ., ಮಾಣಿಕ್ಯ ಡೆಂಗಿ, ವಿಜಯಲಕ್ಷ್ಮೀ ಹೆಚ್., ದೀಕ್ಷಾ ಕೆ.ಸಿ., ಪ್ರಗತಿ ಎನ್.ಜಿ., ಸಂಪ್ರೀತಾ ಬಿ. ಹಾಗೂ ಆದ್ಯಾ ಶೆಟ್ಟಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಶರಣ ಕುಮಾರ ಮತ್ತು ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಕಬಡ್ಡಿ ತರಬೇತುದಾರರು ಅವರು ಅಭಿನಂದಿಸಿದ್ದಾರೆ.
