BlogEntertainmentFashionHighlightsHuman storiesLifestyleLocal newsObituaryTop StoriesTrending

ವೇಗವಾಗಿ ಮರೆಯುವ ಕಾಲದಲ್ಲಿ ಸಂತೋಷ್ ಕುಮಾರ್ ಕೋಟ ಸಂಸ್ಮರಣೆ ನೆನಪಿಸುವ ಕಾರ್ಯ ಶ್ಲಾಘನೀಯ -ಸಾಹಿತಿ ನರೇಂದ್ರ ಕುಮಾರ್ ಕೋಟ

Aware others:

ಕೋಟ: ಈ ಸಮಾಜದಲ್ಲಿ ಯಾವುದೇ ವಸ್ತು ಕಳೆದುಕೊಂಡಾಗ ವೇಗವಾಗಿ ಮರೆತುಬಿಡುವ ಕಾಲದಲ್ಲಿ ಸಂತೋಷ್ ಮೇಷ್ಟ್ರ ಹೆಸರನ್ನು ಸದಾಕಾಲ ನೆನಪುಳಿಯುವಂತೆ ಮಾಡುವ ಪಂಚವರ್ಣ ಕಾರ್ಯವೈಖರಿ ಶ್ಲಾಘನೀಯ ಎಂದು ಸಾಹಿತಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಹೇಳಿದರು.

ಬುಧವಾರ ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇಂಡಿಕಾ ಕಲಾಬಳಗ ಪಡುಕರೆ,ಜೈ ಹಿಂದ್ ಕ್ರಿಕೆಟಸ್೯ ಪಡುಕರೆ ಇವರ ಸಹಯೋಗದೊಂದಿಗೆ ನೆನಪಿನಂಗಳದಿ ಸಂತೋಷ್ ಮೇಷ್ಟ್ರು ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರ ಸಾಹಿತ್ಯಿಕ ಬದುಕು ಸೇರಿದಂತೆ ಅವರ ವಿವಿಧ ಕ್ಷೇತ್ರಗಳ ಆಯಾಮಗಳ ಕಾರ್ಯವೈಖರಿಯನ್ನು ನೆನಪಿಸುವ ಅಥವಾ ಅದರ ಬಗ್ಗೆ ಅಧ್ಯಯನದ ಮೂಲಕ ಒಂದೆಡೆ ರೂಪುಗೊಳಿಸಿ ಅವರ ಹೆಸರಿನಲ್ಲಿ ಉದಯೋನ್ಮುಖ ಸಾಹಿತಿಗಳ ಗುರುತಿಸುವ ಯೋಚನೆಗೆ ಬಣ್ಣ ಬಡಿಯುವ ಕಾರ್ಯ ಮಾಡೋಣ  ಎಂದರಲ್ಲದೆ ಸಾಹಿತ್ಯಿಕ ಕ್ಷೇತ್ರದ ದಿನಗಳಲ್ಲಿ ನನ್ನ ಅವರ ಒಡನಾಟವನ್ನು ಸಂಸ್ಮರಣೆಯಲ್ಲಿ  ತಿಳಿಯ ಪಡಿಸಿದರು.

ಸಭೆಯಲ್ಲಿ ಇದೇ ಬರುವ ಅಗಸ್ಟ್ 30ರಂದು ಜೈಹಿಂದ್ ಕ್ರಿಕೆಟರ್ಸ್ ಪಡುಕರೆ ಸಾರಥ್ಯದಲ್ಲಿ ಸಂತೋಷ್ ಮೇಷ್ಟ್ರ ಸ್ಮರಣಾರ್ಥ ಬೃಹತ್ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರದ ಬಗ್ಗೆಗಿನ ಪೋಸ್ಟರ್ ಅನ್ನು ಅನಾವರಣಗೊಳಿಸಲಾಯಿತು. ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ ಮಣೂರು ಅವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಿ ದೀಪ ಪ್ರಜ್ವಲಿಸಿದರು.

ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ಟ್ರಸ್ಟಿ,  ಕೃಷಿಕ ಭಾಸ್ಕರ ಶೆಟ್ಟಿ, ದಸಂಸ ಕೋಟ ಹೋಬಳಿಯ ಪ್ರಮುಖರಾದ ರಾಜು ಬೆಟ್ಟಿನಮನೆ ಅವರು ಸಂತೋಷ್ ಜೀವನ ನಡೆದುಬಂದ ದಾರಿಗಳನ್ನು ಅವಲೋಕಿಸಿದರು. ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಜೈಹಿಂದ್ ಕ್ರಿಕೆಟರ್ಸ್ ಪಡುಕರೆ ಇದರ ಉದಯ್‌ ಪಡುಕರೆ, ಪ್ರಶಾಂತ್ ಪಡುಕರೆ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಸಂತೋಷ್ ಕಾಂಚನ್ ಸ್ವಾಗತಿಸಿ,ಪ್ರಭಾಕರ್ ಮಣೂರು ಪ್ರಾಸ್ತಾವಿಸಿದರು. ಕಲಾವತಿ ಅಶೋಕ್ ನಿರೂಪಿಸಿ, ರವೀಂದ್ರ ಕೋಟ ಸಹಯೋಜಿಸಿ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!