BlogCulturalEconomyEntertainmentFashionHighlightsHuman storiesLifestyleLocal newsOthersReligionTop StoriesTrending

ಬೈಂದೂರು: ಆಚಾರ್ಯ ಶ್ರೀ ಕೇಶವಜೀ ಬೆಳ್ನಿ ಇವರ ನೇತೃತ್ವದಲ್ಲಿ ಚಾತುರ್ಮಾಸ್ಯ ಪಾದಯಾತ್ರೆ

Aware others:

ಬೈಂದೂರು: ಚಾತುರ್ಮಾಸ್ಯ ಸಮಿತಿ ಬೈಂದೂರು ಇದರ ನೇತೃತ್ವದಲ್ಲಿ ಗೊಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುರ್ಮಸ್ಯ ಕಾರ್ಯಕ್ರಮದ ಅಂಗವಾಗಿ ಏಕಾದಶಿಯ ಭಾನುವಾರ ದಂದು ಶ್ರೀ ಋಷಿ ಪ್ರಭಾಕರ ಗುರೂಜಿಯವರ ದಿವ್ಯ ಆಶೀರ್ವಾದದೊಂದಿಗೆ ಆಚಾರ್ಯ ಶ್ರೀ ಕೇಶವಜೀ ಬೆಳ್ನಿ ಇವರ ನೇತೃತ್ವದಲ್ಲಿ, ಸಿದ್ಧ ಸಮಾಧಿ ಯೋಗ ಬೈಂದೂರು ವಲಯದ ಸಾಧಕರು ಮತ್ತು ಭಕ್ತಾದಿಗಳ ಕೂಡುವಿಕೆಯಲ್ಲಿ “ಚಾತುರ್ಮಾಸ್ಯ ಪಾದಯಾತ್ರೆಯು ಅತೀ ವಿಜೃಂಭಣೆಯಿಂದ ನೆರವೇರಿತು.

ಯಡ್ತರೆ ಬೈಪಾಸ್ ನಿಂದ ಬೆಳಿಗ್ಗೆ 6 ಗಂಟೆಗೆ ಆರಂಭಗೊಂಡ ಪಾದಯಾತ್ರೆ 9.30ರ ಸಮಯಕ್ಕೆ ಬಿಳಿಶಿಲೆ ಶ್ರೀ ವಿನಾಯಕ ದೇವಸ್ಥಾನದ ಸನ್ನಿಧಿಯಲ್ಲಿ ಸಮಾಪನಗೊಂಡಿತು. ಮರವಂತೆ ವರಾಹ ಭಜನಾ ಮಂಡಳಿಯ ಪುಟಾಣಿಗಳ ಕುಣಿತ ಭಜನೆ ಎಲ್ಲರ ಮನಸೂರೆಗೊಂಡಿತು. ಯಾತ್ರಿಕರು ದಾರಿಯುದ್ಧಕ್ಕೂ ಹರಿನಾಮ ಸ್ಮರಣೆ ಮಾಡುತ್ತ ಸಾಗಿದರು.

ಬಳಿಕ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಗಣಹೋಮ ಪೂರ್ಣಹುತಿಯಲ್ಲಿ ಪಾಲ್ಗೊಂಡು ಸಾಮೂಹಿಕ ವಿಷ್ಣುಸಹಸ್ರ ನಾಮ ಭಜನೆ. ಸತ್ಸಂಗ ಎಲ್ಲವೂ ನಡೆಯಿತು. ಗಂಗೊಳ್ಳಿಯಿಂದ ಶಿರಸಿ ತನಕ ಸಾವಿರಾರು ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!