AccidentAuto worldBlogCrime newsGovernmentHighlightsHuman storiesLifestyleLocal newsNational NewsObituaryOthersSportsState newsSuccess storiesTop StoriesTrending

ಕಾನ್ಪುರ: ತರಬೇತಿ ವಿಮಾನ ಪತನಗೊಂಡು ಕರ್ನಾಟಕದ ತರಬೇತಿ ಪಡೆಯುತ್ತಿದ್ದ ಒಬ್ಬರ ಸಹಿತ ಇಬ್ಬರು ಸಾವು

Aware others:

ಕಾನ್ಪುರ: ಉತ್ತರಪ್ರದೇಶ ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನವು ಗುರುವಾರ ಬೆಳಿಗ್ಗೆ ಕಾನ್ಪುರದ ಕತ್ರಿ ಪ್ರದೇಶದ ನತ್ತುಪೂರ್ವ ಗ್ರಾಮದ ಗಂಗಾ ಬ್ಯಾರೇಜ್ ಬಳಿ ಅಪಘಾತಕ್ಕೀಡಾಗಿದ್ದು, ಪೈಲಟ್ ಮತ್ತು ಸಹ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಗಾರ್ಗ್ ಏವಿಯೇಷನ್‌ಗೆ ಸೇರಿದ ವಿಮಾನವು ನಾಗರಿಕ ವಿಮಾನ ನಿಲ್ದಾಣದಿಂದ ತರಬೇತಿಗೆಂದು ಹಾರಾಟ ನಡೆಸುತ್ತಿತ್ತು. ದುರ್ಘಟನೆಯಲ್ಲಿ ಮೃತಪಟ್ಟ ಇಬ್ಬರು ಪೈಲೆಟ್ ಗಳ ಪೈಕಿ ಒಬ್ಬರನ್ನು ಕರ್ನಾಟಕದ ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕಣಜಾರು ಗ್ರಾಮದ ಕಡೇಬೆರ್ಕೆ ನಿವಾಸಿಗಳಾದ ಪ್ರಭಾಕರ ಪೂಜಾರಿ ತಾಯಿ ಶಶಿಕಲ ಪೂಜಾರಿ ಅವರ ಪುತ್ರ ವಿದ್ಯಾರ್ಥಿ ಪೈಲೆಟ್ ಅಭಿಷೇಕ್ ಪೂಜಾರಿ (25) ಎಂದು ಗುರುತಿಸಲಾಗಿದ್ದು, ಮತ್ತೊಬ್ಬರನ್ನು ಗುಜರಾತ್ ಮೂಲದ ಪೈಲೆಟ್ ತರಬೇತಿದಾರ ಸಚಿನ್ ಭಾಟಿಯಾ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ. ಅಭಿಷೇಕ್ ಪೂಜಾರಿ ಅವರು ಉತ್ತರಪ್ರದೇಶದ ಕಾನ್ಪುರದಲ್ಲಿ ಸುಮಾರು 2 ½ ವರ್ಷದಿಂದ ಖಾಸಗೀ ಟ್ರೈನಿ ಪೈಲೆಟ್ ಆಗಿ ತರಬೇತಿ ಪಡೆಯುತ್ತಿದ್ದರು.

ವಿಮಾನವು ಬೆಳಿಗ್ಗೆ 11.30 ರ ಸುಮಾರಿಗೆ ತರಬೇತಿ ಕೇಂದ್ರದಿಂದ ಹೊರಟು 20 ನಿಮಿಷಗಳ ನಂತರ ಹಿಂತಿರುಗುವಾಗ ಅಪಘಾತಕ್ಕೀಡಾಯಿತು. 2023 ರಲ್ಲಿ ವಿಮಾನ ತರಬೇತಿ ಶಾಲೆಯು ಅವಳಿ ಎಂಜಿನ್ ಹೊಂದಿರುವ ಟೆಕ್ನಮ್ ವಿಮಾನವನ್ನು ತರಬೇತಿಗಾಗಿ ಕೇಂದ್ರಕ್ಕೆ ತರಲಾಗಿತ್ತು. ಭಾಟಿಯಾ ಸುಮಾರು 3,000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು ಎಂದು ಲಾಲ್ ಹೇಳಿದ್ದಾರೆ. ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (DGCA) ಮಾಹಿತಿ ನೀಡಲಾಗಿದ್ದು, ಅಪಘಾತದ ಬಗ್ಗೆ ತಾಂತ್ರಿಕ ತನಿಖೆ ನಡೆಸಲಿದೆ ಎಂದು ಅವರು ಹೇಳಿದರು.

ಅಭಿಷೇಕ್ ಪೂಜಾರಿ

ವಿಮಾನವು ಹಾರಾಟದ ಸಂದರ್ಭದಲ್ಲಿಯೇ ಒಂದು ಹೊಲಕ್ಕೆ ಅಪ್ಪಳಿಸಿತು. ಸ್ಥಳೀಯ ನಿವಾಸಿಗಳು ಹೇಳುವಂತೆ ದೊಡ್ಡ ಶಬ್ದವು ಇಡೀ ಪ್ರದೇಶದಲ್ಲಿ ಭಯಭೀತತೆಯನ್ನು ಉಂಟುಮಾಡಿತು. ವಿಮಾನದ ಅವಶೇಷಗಳು ಮೈದಾನದಲ್ಲಿ ಹರಡಿಕೊಂಡಿವೆ. ವಿಮಾನವು ಆ ಪ್ರದೇಶದ ಮೇಲೆ ಹಾರುತ್ತಿದ್ದಾಗ ಇದ್ದಕ್ಕಿದ್ದಂತೆ ಎತ್ತರ ಕಳೆದುಕೊಳ್ಳಲು ಆರಂಭಿಸಿ ಹತ್ತಿರದ ಹೊಲಕ್ಕೆ ಅಪ್ಪಳಿಸಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಓ ಪಿ ಸಿಂಗ್ ತಿಳಿಸಿದ್ದಾರೆ.

ಸಚಿನ್ ಭಾಟಿಯಾ

ಇಳಿಯುವ ಸಮಯದಲ್ಲಿ, ಅದು ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕೆ ಡಿಕ್ಕಿ ಹೊಡೆದು, ತಂತಿ ತುಂಡಾಗಿ ವಿಮಾನಕ್ಕೆ ವ್ಯಾಪಕ ಹಾನಿಯಾಯಿತು. ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ಹಿರಿಯ ಆಡಳಿತ ಅಧಿಕಾರಿಗಳು ರಕ್ಷಣಾ ತಂಡಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳ ಮೂವರು ಸದಸ್ಯರ ತಂಡವು ಅಪಘಾತದ ಸ್ಥಳಕ್ಕೆ ತೆರಳುತ್ತಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಗೆ ಸಹ ಮಾಹಿತಿ ನೀಡಲಾಗಿದ್ದು, ಅಪಘಾತದ ಬಗ್ಗೆ ವಿವರವಾದ ತನಿಖೆ ನಡೆಸಲಿದೆ ಎಂದು ಪಿಟಿಐ ವರದಿ ಮಾಡಿದೆ


Aware others:

Leave a Reply

Your email address will not be published. Required fields are marked *

error: Content is protected !!