ನಾಗರಾಜ್ ಹೆಜಮಾಡಿ ರಚಿಸಿರುವ ನಿತ್ಯ ಪಾರಾಯಣ ಗ್ರಂಥ ಬ್ರಹ್ಮಶ್ರೀ ನಾರಾಯಣ ಗುರು ಸಚ್ಚರಿತೆ ಲೋಕಾರ್ಪಣೆ
ಕೋಟ: ಬ್ರಹ್ಮಶ್ರೀ ನಾರಾಯಣರು ಸೇವಾ ಸಂಘ ಕೋಟ ಇವರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 127 ನೇ ಜನ್ಮ ದಿನಾಚರಣೆ ಅಂಗವಾಗಿ ಕೋಟದ ನಾರಾಯಣಗುರು ಮಂದಿರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗುರು ಸಾಯಿ ಸೇವಕ ನಾಗರಾಜ್ ಹೆಜಮಾಡಿ ರಚಿಸಿರುವ ನಿತ್ಯ ಪಾರಾಯಣ ಗ್ರಂಥ ಬ್ರಹ್ಮಶ್ರೀ ನಾರಾಯಣ ಗುರು ಸಚ್ಚರಿತೆ ಭಾಗ -1ರ ಕೃತಿಯನ್ನು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸದಾನಂದ ಜಿ., ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಿಲ್ಲವ, ಉದ್ಯಮಿ ದಿನೇಶ್ ಅಮೀನ್, ಗಣೇಶ್ ಅಮೀನ್, ಧೀರಜ್ ಹೆಜಮಾಡಿ, ಯುವ ಸಂಘಟನೆಯ ಅಧ್ಯಕ್ಷ ಸುರೇಶ್ ಗಿಳಿಯಾರ್, ಪ್ರಮುಖರಾದ ಪುಟ್ಟಣ್ಣ ಪೂಜಾರಿ, ಉಮೇಶ್ ಪೂಜಾರಿ ಬಾಳೆಬೆಟ್ಟು, ಉಮೇಶ್ ಪೂಜಾರಿ ಕದ್ರಿಕಟ್ಟು, ಪಿ.ಡಿ.ಓ ಹರೀಶ್ ಕುಮಾರ್ ಶೆಟ್ಟಿ,ಯುವ ಮುಖಂಡ ಪ್ರಥ್ವಿರಾಜ್ ಶೆಟ್ಟಿ, ಗುರು ಮಂದಿರದ ಅರ್ಚಕರಾದ ಸಂತೋಷ್ ಪೂಜಾರಿ, ಮನೊಹರ್ ಪೂಜಾರಿ ಉಪಸ್ಥಿತರಿದ್ದರು.
