ಕೆ ಸಿಇಟಿ: ಹೆಮ್ಮಾಡಿ ಜನತಾ ಪಿಯು ಕಾಲೇಜಿಗೆ ರಾಜ್ಯ ಮಟ್ಟದ 52 ನೇ ರ್ಯಾಂಕ್ | ಶ್ರೇಯಸ್ ಪಿ ಗಾಣಿಗಗೆ ಇಂಜಿನಿಯರಿಂಗ್ ವಿಭಾಗದಲ್ಲಿ 769 ರ್ಯಾಂಕ್! ಸಾವಿರದ ಒಳಗೆ 10 ರ್ಯಾಂಕ್ ಗಳು
ಹೆಮ್ಮಾಡಿ: ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್ ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಗ್ರಾಮೀಣ ಭಾಗದ ಪ್ರತಿಷ್ಟಿತ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿರುತ್ತಾರೆ. ಕಾಲೇಜಿನ ವಿದ್ಯಾರ್ಥಿ ಶ್ರಾವ್ಯ ದೇವಾಡಿಗ ರಾಜ್ಯ ಮಟ್ಟದಲ್ಲಿ 52ನೇ ರ‍್ಯಾಂಕ್ ಪಡೆದು ಗ್ರಾಮೀಣ ಭಾಗದಲ್ಲೇ ಹೊಸ ಸಂಚಲನ ಮೂಡಿಸಿದ್ದಾಳೆ. ಈಕೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲೂ ರಾಜ್ಯ ಮಟ್ಟದ ಮೂರನೇ ರ್ಯಾಂಕ್ ಪಡೆದಿದ್ದಾಳೆ. ಕಾಲೇಜಿನ 10 ವಿದ್ಯಾರ್ಥಿಗಳು ಸಾವಿರದ ಒಳಗೆ ರ್ಯಾಂಕ್ ಪಡೆದು ಅಮೋಘ ಸಾಧನೆ ಮೆರೆದಿದ್ದಾರೆ.

ದೀಕ್ಷಾ 98ನೇ ರ್ಯಾಂಕ್, ಶ್ರೇಯಸ್ ಪಿ ಗಾಣಿಗ 137, ಮರಿಯಾ ವಿಯೋಲಾ 392, ಗಗನ್ 415, ಸ್ಮೃತಿಕಾ 741, ಶ್ರದ್ದಾ ಎಸ್ ಮೊಗವೀರ 774 , ಸಹನ್ಯ 776, ಸಾಕ್ಷಿ ಎಸ್ ಪೂಜಾರಿ 858, ಇಂಚರಾ ಅಶೋಕ್ 952, ಅಕ್ಷತಾ ವೀರಣ್ಣ 1144, ಹೇಮಂತ್ ಗಣೇಶ್ ಸಿ. ವಿ 1203, ಪ್ರೀತಿಕಾ 1505, ಆಯುಷ್ 2903, ಮಾನ್ಯ ಪೂಜಾರಿ 4508, ಪ್ರಸಾದ್ ಪೂಜಾರಿ 5262, ದೀಕ್ಷಾ 5592 ರ್ಯಾಂಕ್ ಪಡೆದಿರುತ್ತಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಶ್ರೇಯಸ್ ಪಿ ಗಾಣಿಗಗೆ 769, ಅಕ್ಷತಾ ವೀರಣ್ಣ 1144, ಹೇಮಂತ್ ಗಾಣಿಗ 1203 ಪಡೆದು ಅದ್ವಿತೀಯ ಸಾಧನೆ ಮಾಡಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜನತಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ
ರೀತಿಯಲ್ಲಿ ತರಬೇತುಗೊಳಿಸಿ ಕ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದ ಅಭಿನಂದನೆ ಸಲ್ಲಿಸಿದೆ.
