BlogEconomyEntertainmentFashionGovernmentHighlightsHuman storiesLifestyleLocal newsNational NewsOthersPoliticsProtestState newsTop StoriesTrending

ಕೋಟ: ವಿದ್ಯುತ್ ಜಾಲ ಖಾಸಗಿಕರಣ ವಿರುದ್ಧ ಮೆಸ್ಕಾಂ ಸಿಬ್ಬಂದಿಗಳ ಪ್ರತಿಭಟನೆ

Aware others:

ಕೋಟ: ಮೆಸ್ಕಾಂ ವಿದ್ಯುತ್ ಜಾಲಗಳನ್ನು ಖಾಸಗೀ ಕಂಪೆನಿಗೆ ನೀಡುತ್ತಿರುವುದು ಖಂಡನೀಯ. ಸರ್ಕಾರೀ ಸ್ವಾಮ್ಯದ ಕಂಪೆನಿಗಳನ್ನು ಖಾಸಗೀ ಸಂಸ್ಥೆಗಳಿಗೆ ನೀಡುವುದರಿಂದ ಸಿಬ್ಬಂದಿಗಳ ಸ್ಥಿತಿ ಅತಂತ್ರವಾಗಲಿದ್ದು, ಇದನ್ನು ಮೆಸ್ಕಾಂ ಸಿಬ್ಬಂದಿಗಳು ತೀವ್ರವಾಗಿ ಖಂಡಿಸುವುದಾಗಿ ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ ಎಚ್ಚರಿಸಿದ್ದಾರೆ. ಅವರು ಖಾಸಗಿಕರಣದ ವಿರುದ್ಧ ಕುಂದಾಪುರ ವಿಭಾಗದ ಕೋಟ ಉಪವಿಭಾಗದಲ್ಲಿ ಕ.ವಿ.ಪ್ರ.ನಿ ನೌಕರರ ಸಂಘ, ಕೋಟ ಉಪವಿಭಾಗ ಕೋಟ ಶಾಖಾಕಛೇರಿಯಲ್ಲಿ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೆಸ್ಕಾಂ ಕಂಪನಿಯ ಉಡುಪಿ, ಮಂಗಳೂರು ಹಾಗೂ ಶಿವಮೊಗ್ಗ ವಲಯದಲ್ಲಿರುವ ಹಲವಾರು ವಿದ್ಯುತ್ ಜಾಲಗಳನ್ನು ಟಾಟಾ ಪವರ್ ಕಂಪನಿ ಪ್ರೈವೇಟ್ ಲಿಮಿಟೆಡ್ ನವರು ನಡೆಸುವುದಾಗಿ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್ ಜಾಲಗಳು ಖಾಸಗೀಕರಣದತ್ತ ತಿರುಗುವ ಸಂಶಯ ಎದುರಾಗಿದೆ. ಇದರಿಂದ ಕಂಪೆನಿಗೆ ಹಾಗೂ ಗ್ರಾಹಕರಿಗೆ ತುಂಬಲಾರದ ನಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದರು. ಪ್ರಾಥಮಿಕ ಸಮಿತಿ ಕಾರ್ಯದರ್ಶಿ ಸುಕುಮಾರ ಶೆಟ್ಟಿ ಕಂಪನಿಗೆ ಆಗುವ ನಷ್ಟಗಳನ್ನು ತಿಳಿಸಿ ಮುಂದಿನ ಹೋರಾಟಕ್ಕೆ ಅಣಿಯಾಗುವಂತೆ ನೌಕರರಿಗೆ ಕರೆಕೊಟ್ಟರು.

ಕೋಟ ಸಹಾಯಕ ಇಂಜಿನಿಯರ್ ಪ್ರಶಾಂತ ಶೆಟ್ಟಿ,ಶಿರಿಯಾರ ಶಾಖಾಧಿಕಾರಿ ವೈಭವ ಶೆಟ್ಟಿ ಮತ್ತು ಸಾಸ್ತಾನ ಶಾಖಾಧಿಕಾರಿ ಮಹೇಶ ಕೆ ಮಾತಾನಾಡಿ, ಮುಂದಿನ ದಿನಗಳಲ್ಲಿ ಖಾಸಗೀಕರಣ ಅದರೆ  ಉಗ್ರ ಹೋರಾಟ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದರು.  ಪ್ರತಿಭಟನೆಯಲ್ಲಿ ಕಂಪನಿಯ 50ಕ್ಕೂ ಹೆಚ್ಚು ನೌಕರರು ಮತ್ತು ಗುತ್ತಿಗೆದಾರರು, ಗ್ರಾಹಕರು ಭಾಗವಹಿಸಿದ್ದರು. ಮೇಲ್ವಿಚಾರಕ  ಚಂದ್ರಶೇಖರ ಕೋಟ ನಿರೂಪಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!