ಬಿದ್ಕಲ್‌ಕಟ್ಟೆ ಸರ್ಕಾರಿ ಐ.ಟಿ.ಐ ನಲ್ಲಿ ಕ್ಯಾಂಪಸ್ ಸಂದರ್ಶನ; ಬೆಂಗಳೂರಿನ ಕಿವ್ರಾಜ್ ಎಲಿಕ್ಸರ್ ಸಂಸ್ಥೆ ಯಿಂದ 16 ತರಬೇತಿದಾರರಿಗೆ ಉದ್ಯೋಗಾವಕಾಶ
ಕುಂದಾಪುರ: ಬಿದ್ಕಲ್‌ಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಗುರುವಾರ ಬೆಂಗಳೂರಿನ ಪ್ರತಿಷ್ಠಿತ ಕಿವ್ರಾಜ್ ಎಲಿಕ್ಸರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಕ್ಯಾಂಪಸ್ ಸಂದರ್ಶನ ನಡೆಯಿತು. ಈ ಸಂದರ್ಭ ಸಂಸ್ಥೆಯಿಂದ 16 ತರಬೇತಿದಾರರಿಗೆ ಶಿಶಿಕ್ಷು ತರಬೇತಿ ಹಾಗೂ ಖಾಯಂ ಉದ್ಯೋಗದ ನೇಮಕಾತಿ ಪತ್ರ ವಿತರಿಸಲಾಯಿತು.

ಕಿವ್ರಾಜ್ ಸಂಸ್ಥೆಯ ಸೀನಿಯರ್ ಹೆಚ್.ಆರ್. ಆರ್ಥಿಕ್ ಮಾತನಾಡಿ, ಮಾತನಾಡಿ ಕ್ಯಾಂಪಸ್ ಸಂದರ್ಶನದ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತಮ ಸಂಬಳ, ಇಎಸ್ಐ, ಗ್ರಾಚ್ಯುಟಿ ಸೌಲಭ್ಯ, ಇನ್ಸೆಂಟಿವ್ ಸೌಲಭ್ಯಗಳನ್ನು ಕಂಪೆನಿಯು ನೀಡುತ್ತದೆ. ಆರು ದಶಕಗಳಿಂದ ಸಾರ್ವಜನಿಕ ಸೇವೆಯಲ್ಲಿರುವ ಕಿವ್ರಾಜ್ 1500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, 16ಕ್ಕೂ ಹೆಚ್ಚು ಬ್ರಾಂಡೆಡ್ ಕಂಪನಿಗಳ ಸೇಲ್ಸ್ ಮತ್ತು ಸರ್ವಿಸಿಂಗ್ ಸೌಲಭ್ಯ ನೀಡುತ್ತಿದೆ ಎಂದರು.
ಜನರಲ್ ಮ್ಯಾನೇಜರ್ ಮಂಜುನಾಥ ಕೆ.ಆರ್,, ಲರ್ನಿಂಗ್ & ಡೆವಲಪ್ಮೆಂಟ್ ಹೆಡ್ ದತ್ತರಾಜ್ ಸಂದರ್ಶನ ನಡೆಸಿದರು. ಬಿದ್ಕಲ್‌ಕಟ್ಟೆ ಐ.ಟಿ.ಐನ ಪ್ಲೇಸ್‌ಮೆಂಟ್ ಆಫೀಸರ್ ಮನೋಹರ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು. ಕಿರಿಯ ತರಬೇತಿ ಅಧಿಕಾರಿಗಳಾದ ಪ್ರಸನ್ನ ಆಚಾರ್ಯ, ಪ್ರಫುಲ್ಲ ಕೆ ಎನ್ , ಬಸವ ನಾಯಕ್, ಸುಮಂಗಲ, ರೂಪದೇವಿ, ಅಜಿತ್ ಆಚಾರ್ ಕಚೇರಿ ಸಿಬ್ಬಂದಿಗಳಾದ ಸುಮಾರಾಣಿ, ಮನೋಜ್ ಕುಮಾರ್ ಹಾಗೂ ಫಿಟ್ಟರ್ ಮತ್ತು ಎಂಎಂವಿ ಅಂತಿಮ ವರ್ಷದ ತರಬೇತಿದಾರರು ಭಾಗವಹಿಸಿದ್ದರು. ಪ್ರಾಚಾರ್ಯ ಹರೀಶ್ ಅವರ ಮಾರ್ಗದರ್ಶನದಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
