ಗುಣಮಟ್ಟ ಮತ್ತು ಗ್ರಾಹಕರ ನಂಬಿಕೆಗೆ ಕಿಂಗ್ಸ್ ಪ್ರೀಮಿಯಂ ಕಲೆಕ್ಷನ್ ಸಂಸ್ಥೆ ಉಸಿರಾಗಲಿ: ಶಾಸಕ ಎ ಕಿರಣ್ ಕೊಡ್ಗಿ
ಕುಂದಾಪುರ: ವ್ಯವಹಾರದಿಂದ ಲಾಭದ ಜೊತೆಗೆ ಉತ್ತಮ ಗುಣಮಟ್ಟ ಹಾಗೂ ನಂಬಿಕೆಗೆ ಪಾತ್ರವಾದಾಗ ಉದ್ಯಮ ಸಂಸ್ಥೆಗಳು ದೀರ್ಘ ಕಾಲದ ಯಶಸ್ಸು ಕಾಣುತ್ತವೆ. ಕಿಂಗ್ಸ್ ಪ್ರೀಮಿಯಂ ಕಲೆಕ್ಷನ್ ಸಂಸ್ಥೆ ಗ್ರಾಹಕರ ನಂಬೆಕೆಗೆ ಉಸಿರಾಗಲೀ ಎಮದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಮೇ 15ರ ಶುಕ್ರವಾರ ಕುಂದಾಪುರ ಪುರಸಭಾ ವ್ಯಾಪ್ತಿಯ ಸಂಗಮ್ ಜಂಕ್ಷನ್ ಬಳಿ ಸಮೃದ್ಧಿ ಪ್ಲಾಜಾದಲ್ಲಿ ಆರಂಭಗೊಂಡ ಕಿಂಗ್ಸ್ ಪ್ರೀಮಿಯಂ ಕಲೆಕ್ಷನ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.

ಆರೈಕೆ ಟ್ರಸ್ಟ್ ಸಂಸ್ಥಾಪಕ ರಂಜಿತ್ ಶೆಟ್ಟಿ ಅವರು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರ ಜೊತೆಗೆ ಅವರ ಉತ್ತಮ ಕೆಲಸಗಳು ಜೊತೆಗಿರುತ್ತದೆ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿಗಳಾದ ಉದಯ ಕುಮಾರ್ ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ, ಜನ ಸೇವಾ ಟ್ರಸ್ಟ್ ಸಂಸ್ಥಾಪಕ ವಸಂತ್ ಗಿಳಿಯಾರು, ಸೇವಾ ಚೇತನ ಟ್ರಸ್ಟ್ ಮೂಡುಬಗೆ ಸಂಸ್ಥಾಪಕ ಸಂತೋಷ್ ಕುಮಾರ್ ಶೆಟ್ಟಿ ಅಂಪಾರು, ಸಂಗಮ್ ಫ್ರೆಂಡ್ಸಿನ ಪ್ರಮುಖರಾದ ಸಂತೋಷ್ ಸಂಗಮ್, ಸುರೇಂದ್ರ ಸಂಗಮ್, ವಸಂತ್ ಸಂಗಮ್, ಗುರುರಾಜ್ ಸಂಗಮ್ ಮೊದಲಾದವರು ಉಪಸ್ಥಿತರಿದ್ದರು.
