BlogCrime newsEconomyEducationHighlightsHuman storiesLifestyleLocal newsOthersTop StoriesTrending

ಕೋಟ: ಪತ್ನಿ ಹಾಗೂ ಸಂಬಂಧಿಕರಿಂದ ಕಿರುಕುಳ, ಕೊಲೆ ಬೆದರಿಕೆ ಆರೋಪ- ಪತಿಯಿಂದ ದೂರು

Aware others:

ಕುಂದಾಪುರ: ಹಣ ಮತ್ತು ಚಿನ್ನಕ್ಕಾಗಿ ಸ್ವಂತ ಪತ್ನಿ ಹಾಗೂ ಆಕೆ ಸಂಬಂಧಿಕರು ಕಿರುಕುಳ ನೀಡುತ್ತಿದ್ದುದಲ್ಲದೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಪತಿಯೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟತಟ್ಟು ಎಂಬಲ್ಲಿ ನಡೆದಿದೆ.

ಕೋಟತಟ್ಟು ನಿವಾಸಿ ಸಿರಾಜ್‌ ಶೇಖ್‌ (46) ಎಂಬಾತನೇ ತನ್ನ ಪತ್ನಿ ಹಾಗೂ ಆಕೆಯ ಸಂಬಂಧಿಕರ ವಿರುದ್ಧ ದೂರು ನೀಡಿದವರು. ಸಿರಾಜ್ ಶೇಖ್ ಅವರು 2018ರ ಎಪ್ರಿಲ್ 14ರಂದು ಸಾನ್ಯಾ ಎಂಬಾಕೆಯನ್ನು ಮದುವೆಯಾಗಿದ್ದರು. ಬಳಿಕ ಪತ್ನಿ ಸಾನ್ಯಾ ಶಿಕ್ಷಣ ಮುಂದುವರೆಸಿದ್ದು, ಇತರ ಆರೋಪಿಗಳಾದ ಆಶ್ರಪ್‌ ಮೊಹಮ್ಮದ್‌ ಬಾಪು, ಸಮೀನಾ, ಅದ್ನಾನ್‌, ರಹೀಂ, ಅಬ್ರಾರ್‌ ಅಹಮ್ಮದ್‌ ಖಾನ್‌ ಹಣ ಮತ್ತು  ಚಿನ್ನಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಸಿರಾಜ್ ಶೇಖ್ ಕಿರುಕುಳಕ್ಕೆ ಮಣಿದು ಸುಮಾರು 16 ಪವನ್‌ ಚಿನ್ನಮತ್ತು ಲ್ಯಾಪ್‌ ಟಾಪ್‌ ಹಾಗೂ ಆಕೆಯ ವಿಧ್ಯಾಭ್ಯಾಸದ ಶುಲ್ಕವನ್ನು ನೀಡಿದ್ದರು. ಆದರೂ ಕಿರುಕುಳ ನಿಲ್ಲಿಸದ ಆರೋಪಿಗಳು ಸಿರಾಜ್ ಶೇಖ ಅವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!