BlogCulturalEducationEntertainmentHighlightsHuman storiesLifestyleLocal newsNational NewsOthersState newsTop StoriesTrendingWomen CareWorld

ಖ್ಯಾತ ವಕೀಲ ರವಿಕಿರಣ್ ಮುರ್ಡೇಶ್ವರ ನಟಿಸಿದ ಟ್ರಿಪಲ್ ತಲಾಖ್ ಸಿನೆಮಾ ಅಮೆರಿಕಾದ “ಅಕ್ಕ” ಉತ್ಸವಕ್ಕೆ ಆಯ್ಕೆ

Aware others:

ನ್ಯಾಯಾಧೀಶರ ಪಾತ್ರದಲ್ಲಿ ವಕೀಲ ರವಿಕಿರಣ್ ಮುರ್ಡೇಶ್ವರ

ಕುಂದಾಪುರ: ಖ್ಯಾತ ಕ್ರಿಮಿನಲ್ ಲಾಯರ್ ರವಿಕಿರಣ್ ಮುರ್ಡೇಶ್ವರ ನಟಿಸಿದ ಕರ್ನಾಟಕದ ಸಾಮುದಾಯಿಕ ಭಾಷೆಗಳಲ್ಲಿ ಒಂದಾದ ಬ್ಯಾರಿ ಭಾಷೆಯ ಚಲನಚಿತ್ರ “ಟ್ರಿಪಲ್ ತಲಾಖ್” ಅಮೆರಿಕಾದಲ್ಲಿ  ನಡೆಯುವ “ಅಕ್ಕ” ಉತ್ಸವಕ್ಕೆ ಆಯ್ಕೆಯಾಗಿದೆ. ಅಮೆರಿಕಾದ ಕನ್ನಡ ಕೂಟಗಳ ಆಗರ (ಅಕ್ಕ) ಕನ್ನಡ ಚಲನಚಿತ್ರೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಆಗಸ್ಟ್ 30, 31 ಹಾಗೂ ಸೆಪ್ಟಂಬರ್ 1ರಂದು ತಲಾ ಒಂದೊಂದರಂತೆ ಮೂರು ಪ್ರದರ್ಶನ ನಡೆಯುತ್ತದೆ ಎಂದು ಅಕ್ಕ ಸಂಘಟನೆಯ ಕಾರ್ಯದರ್ಶಿ ಮಾದೇಶ್ ಬಸವರಾಜ್ ತಿಳಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗುಲ್ವಾಡಿ ಟಾಕೀಸ್ ನಿರ್ಮಾಣದ ಟ್ರಿಪಲ್ ತಲಾಖ್ ನಾಡೋಜ ಡಾ.ಸಾ. ರಾ ಅಬುಬಕ್ಕರ್ ಅವರ ಕಥೆಯನ್ನಾಧರಿಸಿದ್ದು, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಯಾಕೂಬ್ ಖಾದ‌ರ್ ಗುಲ್ವಾಡಿ ಅವರದ್ದಾಗಿದೆ. ಮುಸ್ಲಿಂ ಮಹಿಳೆಯರಿಗೆ ತಮ್ಮ ಗಂಡಂದಿರು ಅಂಚೆ, ವಾಟ್ಸಪ್, ಪೋನ್, ಈ ಮೈಲ್ ಈ ತರದ ಒಂದೇ ಬಾರಿ ಮೂರು ಸಾರಿ ಹೇಳುವ ‘ಟ್ರಿಪಲ್ ತಲಾಖ್” ಗೆ “ಪವಿತ್ರ ಕುರಾನ್” ನಲ್ಲಿ ಅರ್ಥವಿಲ್ಲವೆಂದು ಕಾನೂನಿನ ಮೂಲಕ ಹೋರಾಟ ಮಾಡುವ ಸಂಘರ್ಷಮಯ ಶ್ರ ಕಥಾನಕವೆ ” ಟ್ರಿಪಲ್ ತಲಾಖ್ ” ಇದೊಂದು ಚಿಂತನಶೀಲ ಸಂವೇನಾತ್ಮಕ ಕಥಾವಸ್ತು. ಹೃದಯಸ್ಪರ್ಶಿ ದೃಶ್ಯಗಳ ಮೂಲಕ ಕಥಾಹಂದರ ಬಿಚ್ಚಿಕೊಳ್ಳುವ ಸಿನೆಮಾದಲ್ಲಿ ಕುಂದಾಪುರದ ಪ್ರಸಿದ್ಧ ಕ್ರಿಮಿನಲ್ ಲಾಯರ್ ರವಿಕಿರಣ್ ಮುರ್ಡೇಶ್ವರ ನ್ಯಾಯಾಧೀಶರ ಪಾತ್ರದಲ್ಲಿ ಇಡೀ ಕಥೆಗೆ ಜೀವ ತುಂಬಿದ್ದಾರೆ.

ಕರ್ನಾಟಕದ ಗ್ರಾಮೀಣ ಭಾಗವಾದ ಕುಂದಾಪುರದ ಸಿನೆಮಾವೊಂದು ಅದೂ ಸಮುದಾಯವೊಂದರ ಭಾಷೆಯ ಚಿತ್ರ ಅಕ್ಕ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಟ್ರಪಲ್ ತಲಾಖ್ ಚಿತ್ರದ ಟ್ರೈಲರ್ ನೋಡಲು ಇಲ್ಲಿ ಕ್ಲಿಕ್ಕಿಸಿ 👇

ಟ್ರಿಪಲ್ ತಲಾಖ್ ಟ್ರೈಲರ್

Aware others:

Leave a Reply

Your email address will not be published. Required fields are marked *

error: Content is protected !!