BlogEconomyEntertainmentFashionGovernmentHighlightsHuman storiesLifestyleLocal newsOthersPoliticsProtestState newsTop StoriesTrendingWomen Care

ಸಾಲಿಗ್ರಾಮ: ಪಟ್ಟಣ ಪಂಚಾಯಿತಿಗೆ ಖಾಯಂ ಮುಖ್ಯಾಧಿಕಾರಿ ನೇಮಕಕ್ಕೆ ಆಗ್ರಹ – ಜಿಲ್ಲಾಧಿಕಾರಿಗಳಿಗೆ ಮನವಿ

Aware others:

ಉಡುಪಿ: ನಿರಂತರವಾಗಿ ಖಾಲಿ ಇರುವ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹುದ್ದೆಗೆ ಬದಲಿ ಖಾಯಂ ಮುಖ್ಯ ಅಧಿಕಾರಿಯನ್ನು ನೇಮಕಗೊಳಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗರೀಕರು ಉಡುಪಿ ಜಿಲ್ಲಾಧಿಕಾರಿಗಳಿಗೆ ಬುಧವಾರ ಸಂಜೆ ಮನವಿ ಸಲ್ಲಿಸಿದ್ದಾರೆ.

ಸಾಲಿಗ್ರಾಮ ಪಟ್ಟಣ ಪಂಚಾಯತಿನಲ್ಲಿ ಎರಡು ವರ್ಷಗಳಿಂದ ಖಾಯಂ ಮುಖ್ಯ ಅಧಿಕಾರಿಗಳು ಹುದ್ದೆಯಲ್ಲಿ ಇಲ್ಲದೆ ಪ್ರಭಾರ ಮುಖ್ಯಾಧಿಕಾರಿಯಾಗಿ ಬೈಂದೂರು ಪಟ್ಟಣ ಪಂಚಾಯಿತಿನ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಅವರನ್ನು ಉಡುಪಿ ಜಿಲ್ಲಾಧಿಕಾರಿಗಳು ನೇಮಕಗೊಳಿಸಿದ್ದರು. ಪ್ರಭಾರ ಮುಖ್ಯಾಧಿಕಾರಿಗಳು ವಾರದಲ್ಲಿ ಎರಡು ದಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ನಮ್ಮೂರಿನ ನಾಗರಿಕರು ಪಟ್ಟಣ ಪಂಚಾಯತಿನ ತಮ್ಮ ಕಚೇರಿಯ ಕೆಲಸ ಕಾರ್ಯಗಳಿಗೆ ನಿರಂತರವಾಗಿ ಕಷ್ಟಪಡುತ್ತಿದ್ದು ನಾಗರಿಕರಿಗೆ ಅನ್ಯಾಯವಾಗುತ್ತಿದೆ. ಪಟ್ಟಣ ಪಂಚಾಯಿತಿನಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಒಂದು ವರ್ಷದಿಂದ ಆಡಳಿತ ಅಧಿಕಾರಿಯ ಆಡಳಿತ ಇರುವ ಈ ಸಮಯದಲ್ಲಿ ಅಭಿವೃದ್ಧಿ ಕಾರ್ಯಗಳು ಕೂಡ ಕುಂಟಿತಗೊಂಡಿದೆ. ಅಭಿವೃದ್ಧಿ ಕಾಮಗಾರಿಗಳಿಗೂ ಕೂಡ ಕಷ್ಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ತುರ್ತು  ಕಾಮಗಾರಿಗಳನ್ನು ನೆರವೇರಿಸುವ ಅಧಿಕಾರಿಗಳಿಲ್ಲದೆ ಇವರನ್ನ ಯಾವಾಗ ಬರುತ್ತಾರೆ ಎಂದು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಸದ್ರಿ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್  ಕಚೇರಿಗೆ ಆಗಮಿಸುವ ನಾಗರಿಕರಿಗೆ ಉಡಾಫೆ ಉತ್ತರದ ಮೂಲಕ ಬೈದು ಕಳಿಸುವುದು ಕಚೇರಿಯ ಕೆಲಸ ಕಾರ್ಯಗಳಿಗೆ ನಿರಂತರ ಅಲೆದಾಡಿಸುತ್ತಿರುವುದು ಚಾಳಿ ನಿರಂತರವಾಗಿ ನಡೆಯುತ್ತಿದ್ದು ಕೇಳಿದರೆ ಹಲ್ಲೆ ಮಾಡುವ ರೀತಿಯಲ್ಲಿ ವರ್ತಿಸುವ ಈ ಅಧಿಕಾರಿಯ ಕುರಿತು ನಾವುಗಳು ಇದೀಗಾಗಲೇ ಹಲವಾರು ಬಾರಿ ತಮಗೆ ಮತ್ತು ಮೇಲಾಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ದೂರನ್ನು ಸಲ್ಲಿಸಿದ್ದರು ಕೂಡ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಲಾಗಿದೆ. ಸೆಪ್ಟಂಬರ್ 20ರ  ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ರಸ್ತೆಯ ಬಳಿಯಲ್ಲಿ ಜೀವನ ನಿರ್ವಹಣೆಗಾಗಿ ಮೀನು ವ್ಯಾಪಾರ ಮಾಡುವ ಮಹಿಳೆಯರಿಗೆ ರಿಗೆ ಹಲ್ಲೆ ಮಾಡಿ ಸಾರ್ವಜನಿಕರಿಂದ ಒದೆ ತಿಂದ ವಿಡಿಯೋಗಳು ಪೋಲಿಸ್ ದೂರು ದಾಖಲಾಗಿರುವ ಬಗೆ, ಕರ್ನಾಟಕ ರಾಜ್ಯದಾದ್ಯಂತ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಎಲ್ಲಾ ಮಾಧ್ಯಮಗಳಲ್ಲಿಯೂ ಕೂಡ ಪ್ರಚಾರಗೊಳ್ಳುತ್ತಿದೆ. ಈ ಮೂಲಕ ಕರ್ನಾಟಕ ಸರಕಾರದ ಆಡಳಿತಕ್ಕೆ ಕಪ್ಪು ಚುಕ್ಕೆಯನ್ನು ಈ ಅಧಿಕಾರಿ ತರುತ್ತಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿಗಳು ಅಜಯ್ ಭಂಡಾರ್ಕರ್ ಅವರನ್ನು ಎತ್ತಂಗಡಿ ಮಾಡಬೇಕು ಮತ್ತು ಖಾಯಂ ಮುಖ್ಯಾಧಿಕಾರಿಯನ್ನು ನೇಮಿಸಬೇಕು ಇಲ್ಲದೇ ಇದ್ದರೆ ಸೆಪ್ಟಂಬರ್ 25ರ ಶುಕ್ರವಾರ ಸಾಲಿಗ್ರಾಮ ಪಟ್ಟಣ ಪಂಚಾಯಿತಿನ ಮುಂಭಾಗ ಊರ ನಾಗರಿಕರ ಮಹಿಳೆಯರ ಮೀನುಗಾರ ಮಹಿಳೆಯರ ಸಾರ್ವಜನಿಕರ ಬೆಂಬಲದೊಂದಿಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಲಾಯಿತು. ಈ ಸಂದರ್ಭ ಸಾಮಾಜಿಕ ಹೋರಾಟಗಾರ ನಾಗರಾಜ್ ಗಾಣಿಗ, ಕೋಟ ಬ್ಲಾಕ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ರಮೇಶ್ ಮೆಂಡನ್ ಹಾಗೂ ಇತರರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!