ಗಣೇಶೋತ್ಸವ ನಮ್ಮ ಸಾಂಸ್ಕೃತಿಕ ಪ್ರತೀಕ – ಅಭಿಜಿತ್ ಪಾಂಡೇಶ್ವರ | ಪಾಂಡೇಶ್ವರ ಮೂಡಹಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 14ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
ಕೋಟ: ಗಣೇಶೋತ್ಸವ ಕಾರ್ಯಕ್ರಮಗಳು ಗ್ರಾಮದ ಒಗ್ಗಟ್ಟು ಕೇಂದ್ರಿಕರಿಸುವ ಉತ್ಸವವಾಗಿ ಸಂಸ್ಕ್ರತಿ ಸಾರುವ ಉತ್ಸವವಾಗಿದೆ. ಆಗಿನ ಕಾಲದಲ್ಲಿ ಬಾಲಗಂಗಾಧರನಾಥ ತಿಲಕರು ಗಣೇಶೋತ್ಸವದ ಮೂಲಕ ಧಾರ್ಮಿಕ ಭಾವನೆ ಜೊತೆಗೆ ಸಾಂಸ್ಕೃತಿಕ ಮೆರುಗಿನೊಂದಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಜನ ಸಹಭಾಗಿತ್ವಕ್ಕಾಗಿ ರೂಪಿಸಿದ್ದರು ಎಂದು ಪಾಂಡೇಶ್ವರ ಕಳಿಬೈಲು ಶ್ರೀ ಸ್ವಾಮೀ ಕೊರಗಜ್ಜ ದೈವಸ್ಥಾನದ ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ ಹೇಳಿದರು. ಸೋಮವಾರ ಇಲ್ಲಿನ ಪಾಂಡೇಶ್ವರ ಮೂಡಹಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 14ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇದೇ ವೇಳೆ ಗ್ರಾಮದ ಹಿರಿಯ ಕೃಷಿಕ ಕೃಷ್ಣ ಮರಕಾಲ, ಕ್ರೀಡಾ ಸಾಧಕ ಸುಭಾಷ್ ಪೂಜಾರಿ ಇವರುಗಳನ್ನು ಸನ್ಮಾನಿಸಲಾಯಿತು. ಗ್ರಾಮದಲ್ಲಿನ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗಣೇಶೋತ್ಸವ ವತಿಯಿಂದ ಹಮ್ಮಿಕೊಂಡ ಕ್ರೀಡಾಕಾರ್ಯಕ್ರಮದ ವಿಜೇತರಾದವರಿಗೆ ಬಹುಮಾನ ವಿತರಣೆ ಜರಗಿತು.
ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಆಡಳಿತ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಘು ಪೂಜಾರಿ, ಎನ್ ಭಾಸ್ಕರ ಸುವರ್ಣ, ಸಮಿತಿ ಗೌರವಾಧ್ಯಕ್ಷ ನಾರಾಯಣ ವಿ ಆಚಾರ್ಯ, ರವಿ ಪೂಜಾರಿ ಕುದ್ರು, ಸಮಿತಿಯ ಅಧ್ಯಕ್ಷ ವೆಂಕಟೇಶ ಪೂಜಾರಿ ಉಪಸ್ಥಿತರಿದ್ದರು. ಮಹೇಂದ್ರ ಆಚಾರ್ಯ ಹೆರಂಜೆ ಸ್ವಾಗತಿಸಿ ನಿರೂಪಿಸಿ ಸನ್ಮಾನಪತ್ರ ವಾಚಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಾಂಡೇಶ್ವರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ಈಶ ಲಾಸ್ಯ ನೃತ್ಯ ತಂಡದಿಂದ ನೃತ್ಯ, ಶ್ರೀಶ ಆಚಾರ್ಯ ಇವರಿಂದ ಗಾನವೈಭವ ಕಾರ್ಯಕ್ರಮಗಳು ಜರಗಿದವು.
