AgricultureBlogCulturalEconomyEducationEntertainmentFashionHighlightsHuman storiesLifestyleLocal newsSportsTop StoriesTrending

ಕಾರ್ಕಡ: ಕೆಸರುಗದ್ದೆಯಲ್ಲಿ ಮೊದಲ ಬಾರಿಗೆ ಮಿಂದೆದ್ದ ಕಾರ್ಕಡದ ಜನತೆ |ಕೆಸ್ರರಂಗ್ ಆಟ – 2026 “ಗಮ್ಮತ್ತಿಗಾಟ ಗಂಜಿಯೂಟ” ಕ್ರೀಡಾಕೂಟ ಸಂಪನ್ನ

Aware others:

ಕೋಟ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಕಡ ಹಾಗೂ ಕಾರ್ಕಡ ಗ್ರಾಮದ ಹತ್ತು ಸಮಸ್ತರ ಸಹಕಾರದೊಂದಿಗೆ ಕಾರ್ಕಡ ಗ್ರಾಮಸ್ಥರಿಗಾಗಿ ಮೊದಲ ಬಾರಿಗೆ ಆಯೋಜಿಸಲಾದ `ಕೆಸ್ರ್ ರಂಗ್ ಆಟ – 2026′ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಕಾರ್ಕಡ ಜನತೆ ಮಿಂದೆದ್ದರು. 

ಭಾನುವಾರ ನಡೆದ ಕಾರ್ಯಕ್ರಮವನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ನ ಮಾಜಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಣ್ಣಿನ ಜೊತೆಗಿನ ಮನುಷ್ಯರ ಸಂಬಂಧ ಕೇವಲ ವ್ಯಾವಹಾರಿಕವಾಗಿ ಉಳಿದಿರುವುದು ವಿಷಾಧನೀಯ. ಇಂತಹಾ ಸಂದರ್ಭದಲ್ಲಿ ಗ್ರಾಮೀಣ ಭಾಗಗಳಲ್ಲಿ ಕೆಸರುಗದ್ದೆ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಹೇಳಿದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಬು ಮರಕಾಲ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣಪಂಚಾಯತ್ ಮಾಜಿ ಸದಸ್ಯ ಸಂಜೀವ ದೇವಾಡಿಗ, ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಕಾರ್ಯದರ್ಶಿ ಶೀನ, ಕೋಶಾಧಿಕಾರಿ ಸಂತೋಷ್ ಪೂಜಾರಿ, ಜೊತೆಕಾರ್ಯದರ್ಶಿ ದೇವೇಂದ್ರ ಪೂಜಾರಿ, ದುರ್ಗಾಪರಮೇಶ್ವರಿ ದೇಗುಲದ ಮೊಕ್ತೇಸರ ಲಕ್ಷ್ಮಣ ನಕ್ಷತ್ರಿ, ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಉಪಸ್ಥಿತರಿದ್ದರು.

ಕಾರ್ಕಡ ವಿಶ್ವೇಶ್ವರ ದೇವಸ್ಥಾನದ ಹತ್ತಿರದ ಕೆಸರುಗದ್ದೆಯಲ್ಲಿ ನಡೆದ ವಿವಿಧ ವಿಭಾಗಗಳ ಕ್ರೀಡಾ ಸ್ಪರ್ಧೆಗಳಲ್ಲಿ ಪುರುಷರಿಗೆ ಉಪ್ಪಿನ ಮೂಟೆ, ಹಿಮ್ಮುಖ ಓಟ, ಕಪ್ಪೆ ಜಿಗಿತ, ಓಟ, ಮಡಿಕೆ ಒಡೆಯುವುದು ಹಾಗೂ ಹಗ್ಗ ಜಗ್ಗಾಟ, ಮಹಿಳೆಯರಿಗೆ ಹಗ್ಗ ಜಗ್ಗಾಟ, ಓಟ, ತೆಂಗಿನಕಾಯಿ ಎಸೆತ, ಹಿಮ್ಮುಖ ಓಟ, ನಿಂಬೆ ಚಮಚ ಓಟ ಹಾಗೂ ಮಡಿಕೆ ಒಡೆಯುವುದು. ಮಕ್ಕಳಿಗೆ ಓಟ, ಹಿಮ್ಮುಖ ಓಟ, ಒಂದು ಕಾಲಿನ ಓಟ ಸ್ಪರ್ಧೆ, ತ್ರೋಬಾಲ್ ಎಸೆತ, 50 ವರ್ಷ ಮೇಲ್ಪಟ್ಟವರಿಗೆ ಓಟದ ಸ್ಪರ್ಧೆಗಳು ಜರಗಿದವು.


Aware others:

Leave a Reply

Your email address will not be published. Required fields are marked *

error: Content is protected !!