BlogEconomyEducationEntertainmentFashionHighlightsHuman storiesLifestyleLocal newsSuccess storiesTop StoriesTrending

*ಕೋಟ: ಶಾಲಾ ಶಿಕ್ಷಕರ ಪರೀಕ್ಷಾ ಪೂರ್ವ ತರಬೇತಿ ಉಚಿತ ಕಾರ್ಯಗಾರ ಶ್ಲಾಘನೀಯ – ಸಂಸದ ಕೋಟ | ಭಾನುವಾರ ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಶ್ರೀ ಕೃಷ್ಣ ಪ್ರಸಾದ್ ಪೌಂಡೇಶನ್‌ನ ಪ್ರಾಯೋಜಕತ್ವದಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ಕೋಟ ನೇತೃತ್ವದಲ್ಲಿ ನಡೆದ ಉಚಿತ ತರಬೇತಿ ಕಾರ್ಯಗಾರ*

Aware others:

ಕುಂದಾಪುರ: ರಾಜ್ಯ ಸರ್ಕಾರದಿಂದ ಸರಿಸುಮಾರು 15 ಸಾವಿರ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ, ದೈಹಿಕ ಶಿಕ್ಷಕ ಮತ್ತು ಕಂಪ್ಯೂಟರ್ ಶಿಕ್ಷಕರ ಹುದ್ದೆಗಳನ್ನು ಆಹ್ವಾನಿಸಿದ್ದು, ಸರ್ಕಾರಿ ಇಲಾಖೆಯಲ್ಲಿ ಅತಿ ಹೆಚ್ಚು ಉತ್ತರ ಕರ್ನಾಟಕದ ಜನ ಆಯ್ಕೆಗೊಳ್ಳುವ ಇಂದಿನ ಕಾಲಘಟ್ಟದಲ್ಲಿ ನಮ್ಮ ಅವಿಭಜಿತ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳಿಗೆ ಕೋಟದ ವಿ.ಶೈನ್ ಕೋಚಿಂಗ್ ಸೆಂಟರ್ ಒಂದಿಷ್ಟು ಯುವ ಮನಸ್ಸುಗಳಿಗೆ ಉದ್ಯೋಗ ಸೃಷ್ಠಿಯ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಭಾನುವಾರ ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಶ್ರೀ ಕೃಷ್ಣ ಪ್ರಸಾದ್ ಪೌಂಡೇಶನ್‌ನ ಪ್ರಾಯೋಜಕತ್ವದಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ಕೋಟ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಉಚಿತ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಎಷ್ಟು ಯಶಸ್ಸು ಕಾಣುತ್ತೇವೆ. ಅದೇ ರೀತಿ ಉದ್ಯೋಗ ಕ್ಷೇತ್ರದಲ್ಲೂ ಯುವ ಮನಸ್ಸುಗಳು ವಿ.ಶೈನ್ ಕೋಚಿಂಗ್ ಮೂಲಕ ಶಿಕ್ಷಕರ ಕ್ಷೇತ್ರದಲ್ಲಿ ಮುಂಚೂಣಿಗೆ ನಿಲ್ಲುವಂತ್ತಾಗಲಿ ಎಂದು ಹಾರೈಸಿದರು.

ಈ ಸಂದರ್ಭ ಶಿಕ್ಷಕರ ದಿನಾಚರಣೆ ಪ್ರಯುಕ್ತ ಉಪನ್ಯಾಸಕರಾದ ಡಾ.ಪದ್ಮನಾಭ ಸಿ.ಎಚ್, ಆನಂದ್ ಜಿ, ಸುಧೀರ್ ಪ್ರಭು ಇವರನ್ನು ವಿ.ಶೈನ್ ಕೋಚಿಂಗ್ ಸೆಂಟರ್ ಪರವಾಗಿ ಗೌರವಿಸಲಾಯಿತು. ವಿಶೈನ್ ಕೋಚಿಂಗ್ ಸೆಂಟರ್ ಮುಖ್ಯಸ್ಥ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕ ಗಿರೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಪ್ರಸಾದ ಬಿಲ್ಲವ ವಂದಿಸಿದರು. ಪೂರ್ವಾಹ್ನ 9.30ರಿಂದ ಆರಂಭಗೊಂಡ ಕಾರ್ಯಾಗಾರ ಸಂಜೆವರೆಗೆ ನಡೆಯಿತು.


Aware others:

Leave a Reply

Your email address will not be published. Required fields are marked *

error: Content is protected !!