CulturalEconomyEntertainmentFashionHighlightsHuman storiesLifestyleLocal newsOthersSuccess storiesTop StoriesTrendingWomen Care

ಸಾಲಿಗ್ರಾಮ- ರೇಡಿಯೋ ನಿರೂಪಕಿ ಆರ್.ಜೆ ನಯನ ಶೆಟ್ಟಿ, ಆಶಾ ಕಾರ್ಯಕರ್ತೆ ರತ್ನ ಸಾಸ್ತಾನ ಇವರಿಗೆ ವಿಶ್ವಮಹಿಳಾ ದಿನಾಚರಣೆ ಗೌರವ

Aware others:

ಕೋಟ: ಸಾಲಿಗ್ರಾಮ ಕರಾವಳಿ ಮೊಗವೀರ ಸಭಾಭವನದಲ್ಲಿ ಮಾ.15ರಂದು ಹಮ್ಮಿಕೊಳ್ಳಲಾದ ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ ಇವರ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾಂಡೇಶ್ವರ ವಲಯ ಇವರ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರೇರಣಾ ಸಮಾನತೆಯ ಹೂರಣ ಕಾರ್ಯಕ್ರಮದಲ್ಲಿ ರೇಡಿಯೋ ನಿರೂಪಕಿ ಆರ್.ಜೆ ನಯನ ಶೆಟ್ಟಿ ಮತ್ತು ಆಶಾ ಕಾರ್ಯಕರ್ತೆ ರತ್ನ ಸಾಸ್ತಾನ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಹಿಳೆ ಕಟುಂಬ ನಿರ್ವಹಣೆಯ ಜತೆಗೆ ಸರ್ವಕ್ಷೇತ್ರದಲ್ಲಿ ಅಡೆತಡೆಗಳನ್ನು ಮೀರಿ ಬೆಳೆಯುತ್ತಿದ್ದಾಳೆ ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ, ರೋಟರಿ ಸೇರಿದಂತೆ ರಾಜಕಾರಣದಲ್ಲಿ ಕ್ಷೇತ್ರದಲ್ಲೂ ಸೈ ಎನಿಸಿಕೊಂಡು ಪುರುಷರಿಗೆ ಸರಿಸಮಾನರಾಗಿ ಗುರುತಿಸಿಕೊಂಡಿದ್ದಾಳೆ ಎಂದು ರೇಡಿಯೋ ನಿರೂಪಕಿ ಆರ್ ಜೆ ನಯನ ಶೆಟ್ಟಿ ಹೇಳಿದರು.

ರೊ.ಸಹಾಯಕ ಗವರ್ನರ್ ಆನಂದ ಶೆಟ್ಟಿ, ಚೇತನಾ ಹೈಸ್ಕೂಲ್ ಹಂಗಾರಕಟ್ಟೆ ಮುಖ್ಯ ಶಿಕ್ಷಕಿ  ಕಲ್ಪನಾ ಶೆಟ್ಟಿ, ಸೋಮೇಶ್ವರ ಆಯುಷ್ ವೈದ್ಯಾಧಿಕಾರಿ ಡಾ. ರಶ್ಮಿ,  ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ ಇದರ ಫಾರ್ಮಸಿ ಆಫೀಸರ್ ಸೀಮಾ ಮ್ಯಾಥ್ಯೂ, ಧರ್ಮಸ್ಥಳ ಗ್ರಾ.ಯೋಜನೆಯೋಜನಾಧಿಕಾರಿ ರಮೇಶ್‌ಪಿ.ಕೆ,  ಗ್ರಾ.ಯೋ.ಪಾಂಡೇಶ್ವರ ವಲಯ ಮೇಲ್ವಿಚಾರಕಿ ಜಯಲಕ್ಷ್ಮೀ, ರೋಟರಿ ವಲಯ ಸೇನಾನಿ ಸುಲತಾ ಎಸ್. ಹೆಗ್ಡೆ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ  ಜ್ಯೋತಿ ಉದಯ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಸಿದರು.  ಉಪನ್ಯಾಸಕ ನರೇಂದ್ರ ಕುಮಾರ್ ಕೋಟ ನಿರೂಪಿಸಿ ಕಾರ್ಯದರ್ಶಿ ಮುರುಳೀಧರ ನಾಯರಿ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!