BlogCulturalEconomyEntertainmentFashionHighlightsHuman storiesLifestyleLocal newsOthersReligionSuccess storiesTop StoriesTrending

ಸಂಜೀವರ ಕಲಾರಾಧನೆ ಯುವ ಸಮೂಹಕ್ಕೆ ದಾರಿದೀಪ- ಆನಂದ್ ಸಿ ಕುಂದರ್.

Aware others:

ಕದ್ರಿಕಟ್ಟು ಗ್ರಾಮಸ್ಥರ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಹೇಳಿಕೆ

ಕೋಟ: ಸಂಜೀವ ಪೂಜಾರಿ ಎಂಬ ಕಲಾ ಶಕ್ತಿ ಗ್ರಾಮೀಣ ಭಾಗದಲ್ಲಿ ಕಲಾಸಕ್ತಿಯ ಕೇಂದ್ರವಾಗಿಸಿ ಯುವ ಸಮೂಹಕ್ಕೆ ದಾರಿದೀಪವಾಗಿದೆ.  ಸಂಜೀವ ಕದ್ರಿಕಟ್ಟು ಅಪ್ರತಿಮಾ ಕಲಾವಿದನಾಗಿ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು. ಅವರು ಸೋಮವಾರ ಕೋಟದ ಕದ್ರಿಕಟ್ಟು ಊರ ಹತ್ತು ಸಮಸ್ತರಿಂದ  ವರ್ಷಂಪ್ರತಿ ನಡೆಸಲ್ಪಡುವ 35ನೇ ವರ್ಷದ ಶ್ರೀ ಕ್ಷೇತ್ರ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ,ಸತ್ಯನಾರಾಯಣ ಪೂಜಾ ಕಾರ್ಯಕ್ರಮ,ರಂಗಕರ್ಮಿ ಕಲಾವಿದ ಕದ್ರಿಕಟ್ಟು ಸಂಜೀವ ಪೂಜಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ವೇಳೆ ಅಮೃತೇಶ್ವರೀ ಮೇಳದ ಸ್ತ್ರೀ ವೇಷಧಾರಿ ಮಾಧವ ಜೋಗಿ ನಾಗೂರು ಇವರಿಗೆ ಕದ್ರಿಕಟ್ಟು ಸಂಜೀವ ಪೂಜಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಕಲಾವಿದ ಕೋಟ ಸುರೇಶ್ ಬಂಗೇರ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಶಿವ ಪೂಜಾರಿ, ಉದ್ಯಮಿ ಸದಾನಂದ ಜಿ, ಕದ್ರಿಕಟ್ಟು ಗ್ರಾಮಸ್ಥರ ಪರವಾಗಿ ಗಣೇಶ್ ಪೂಜಾರಿ, ಗಣೇಶ್ ಕುಂದರ್, ಅಮೃತ ಯುವಕ ಸಂಘದ ಅಧ್ಯಕ್ಷ ಜೀವನ್ ಪೂಜಾರಿ ಕದ್ರಿಕಟ್ಟು, ಕೋಟ ಹಿರೇಮಹಾಲಿಂಗೇಶ್ಚರ ಮಿತ್ರ ವೃಂದದ ಕಾರ್ಯದರ್ಶಿ ಜಿ.ಎಸ್ ಆನಂದ್ ದೇವಾಡಿಗ, ಗೌರವ ಸಲಹೆಗಾರ ಜಗನಾಥ ಕಾಂಚನ್, ರಮೇಶ್ ಪೂಜಾರಿ ಉಪಸ್ಥಿತರಿದ್ದರು. ದೇಗುಲದ ಟ್ರಸ್ಟಿ ಚಂದ್ರ ಆಚಾರ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಉಪನ್ಯಾಸಕ ನರೇಂದ್ರ ಕುಮಾರ್ ಕೋಟ ನಿರೂಪಿಸಿ ವಂದಿಸಿದರು. ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಸುಬ್ರಹ್ಮಣ್ಯ ಅಡಿಗ ನೆರವೇರಿಸಿದರು. ಮೇಳದ ಕಲಾವಿದರಿಂದ  ಧರ್ಮಸಂಕ್ರಾತಿ, ಮೀನಾಕ್ಷಿ ಕಲ್ಯಾಣ  ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು. ಯಕ್ಷಗಾನ ಬಯಲಾಟದ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ, ಶ್ರೀ ರಾಮಾಮೃತ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, ಮಹಾಅನ್ನಸಂತರ್ಪಣೆ ಕಾರ್ಯಕ್ರಮ ಜರಗಿತು.


Aware others:

Leave a Reply

Your email address will not be published. Required fields are marked *

error: Content is protected !!