ಕೋಡಿ ಕನ್ಯಾಣ- ಸಂಘ ಸಂಸ್ಥೆಗಳಿಂದ ಯಕ್ಷಕಲೆ ಉಳಿವು – ಸಂಸದ ಕೋಟ ಶ್ರೀನಿವಾಸ ಪೂಜಾರಿ
ಕೋಟ: ಯಕ್ಷಗಾನ ಕಲೆ ಮುಂದಿನ ತಲೆಮಾರಿಗೆ ಕೊಂಡ್ಯೋಯುಲ್ಲಿ ಸಂಘಸಂಸ್ಥೆಗಳ ಪಾತ್ರ ಗಣನೀಯವಾದದ್ದು ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶುಕ್ರವಾರ ಕೋಡಿ ಕನ್ಯಾಣ ಶ್ರೀರಾಮ ದೇಗುಲದ ವಠಾರದಲಿ ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘ ಕೋಡಿ ಕನ್ಯಾಣ ಇವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇಲ್ಲೆ ಇವರ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಯಕ್ಷ ವೇದಿಕೆ ಕೋಡಿ ಕನ್ಯಾಣ ಇವರ ಕೂಡುವಿಕೆಯಲ್ಲಿ ಪ್ರತೀಶ್ ಕುಮಾರ್ ಬ್ರಹ್ಮಾವರ ಇವರ ನಿರ್ದೇಶನದಲ್ಲಿ ಯಕ್ಷಗಾನ ಕುಶ-ಲವ ಕುಟುಂಬ,ಜಾನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಕ್ಷಗಾನ ಕಲೆ ಅತ್ಯಂತ ಶ್ರೀಮಂತ ಕಲೆಯಾಗಿದ್ದು ಕರಾವಳಿ ಈ ಮಣ್ಣಿನ ಸೊಗಡಿಗೆ ಭಾಷಾ ಜ್ಞಾನದ ಜತೆಗೆ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ.ಈ ದಿಸೆಯಲ್ಲಿ ಶ್ರೀರಾಮಪ್ರಸಾದಿತ ಯಕ್ಷಗಾಮ ಕಲಾ ಸಂಘ ಯುವ ಕಲಾವಿದರಿಗೆ ಸ್ಪೂರ್ತಿಯ ಸೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಶ್ರೀರಾಮಪ್ರಸಾದಿತ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಜಗನ್ನಾಥ ಅಮೀನ್ ಕೋಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ,ಸಾಮಾಜಿಕ ಕಾರ್ಯಕರ್ತರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ,ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ ಕೃಷ್ಣ ಕಾಂಚನ್, ಸಂಘದ ಸಂಸ್ಥಾಕ ಮಹಾಬಲ ಭಂಡಾರಿ, ಮಾಜಿ ಜಿ.ಪಂ ಸದಸ್ಯ ಶಂಕರ್ ಎ ಕುಂದರ್, ಯಾಂತ್ರಿಕ ಮೀನುಗಾರ ಸಂಘ ಹಂಗಾರಕಟ್ಟೆ ಕೋಡಿ ಬೇಂಗ್ರೆ ಅಧ್ಯಕ್ಷ ರಾಜು ಎನ್ ಬಂಗೇರ, ಶ್ರೀ ರಾಮ ದೇಗುಲದ ಅಧ್ಯಕ್ಷ ರಾಘವೇಂದ್ರ ಕರ್ಕೇರ,ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ,ರಾಮ ದೇಗುಲದ ಪ್ರದಾನ ಅರ್ಚಕ ಭಾಸ್ಕರ್ ಬಾಯರಿ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಸುರೇಂದ್ರ ಕೋಡಿ,ಉದ್ಯಮಿ ಅಂತೋನಿ ಡಿಸೋಜ,ಕೋಡಿ ಶಾಲಾ ದೈಹಿಯ ಶಿಕ್ಷಣ ಶಿಕ್ಷಕರಾದ ವಿಜಯ ನಾಯರಿ,ಉದ್ಯಮಿ ಶಂಕರ್ ಕುಂದರ್ ಉಪಸ್ಥಿತರಿದ್ದರು.ಸಂಘದ ರಾಜೇಶ್ ಎನ್ ಕರ್ಕೇರ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿದರು,ರಾಧಕೃಷ್ಣ ಸಾಲಿಯಾನ್ ವಂದಿಸಿದರು.
ಕಾರ್ಯಕ್ರಮದ ನಂತರಪ್ರತೀಶ್ ಕುಮಾರ್ ನಿರ್ದೇಶನದಲ್ಲಿ ಸಂಘದ ಕಲಾವಿದರಿಂದ ಕುಶಲವ ಕುಟುಂಬ ಯಕ್ಷಗಾನ ಪ್ರದರ್ಶನ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಸರಸ್ಪತಿ ಜಾನಪದ ತಂಡ ಮಲ್ಪೆ ಇವರಿಂದ ಜಾನಪದ ನೃತ್ಯೋತ್ಸವ ಸ್ಥಳೀಯ ಸಂಘ ಸಂಸ್ಥೆಗಳಿಂದ ಜನಪದ ಗೀತೆಗಳು ಮತ್ತು ಭಾವಗೀತಾ ಸಂಗೀತೆಗಳು ಜರಗಿದವು.
