BlogCrime newsEducationGovernmentHighlightsHuman storiesLifestyleLocal newsOthersState newsTechTop StoriesTrending

ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ಆಸ್ತಿ ತೆರಿಗೆ ವಂಚನೆ : ಇಬ್ಬರು ಆರೋಪಿಗಳ ಬಂಧನ

Aware others:

ಉಡುಪಿ: ಉಡುಪಿ ನಗರಸಭೆಯ ಕಚೇರಿಯಲ್ಲಿ ಇ-ಸ್ವೀಕೃತಿ ಮೂಲಕ ಆಸ್ತಿತೆರಿಗೆ ಪಾವತಿ ಮಾಡುತ್ತಿರುವ ಸಂದರ್ಭ ಯೂನಿಯನ್ ಬ್ಯಾಂಕಿನ ನಕಲಿ ಸೀಲ್ ಹಾಗೂ ದಾಖಲೆ ಸೃಷ್ಟಿಸಿ ವಂಚಿಸಿದ್ದ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಉಡುಪಿ ತಾಲೂಕು ಕಸ್ತೂರ್ಬಾನಗರ 76 ಬಡಗುಬೆಟ್ಟು,ಕಮಲ ನಿಲಯ ನಿವಾಸಿ ಸುಪೇಶ್ (25) ಹಾಗೂ ಕುಂತಾಲ ನಗರ ಮೂಡು ಅಲೆವೂರು ನೈಲಪಾದೆ  ರಸ್ತೆಯ ಶ್ರೀಧರ ನಿವಾಸದ ಶಾಂತಾ (43) ಎಂದು ಗುರುತಿಸಲಾಗಿದೆ.

ಫೆಬ್ರುವರಿ 12ರಂದು ಉಡುಪಿ ನಗರ ಸಭೆ ಪೌರಾಯುಕ್ತ ಮಹಾಂತೇಶ್ ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಫೆಬ್ರುವರಿ 3ರಂದು ಕಚೇರಿಯಲ್ಲಿ ಆಸ್ತಿತೆರಿಗೆ ಪಾವತಿಯನ್ನು ತುಲನೆ ಮಾಡುತ್ತಿರುವಾಗ ಜನವರಿ 28ರಂದು ಆಸ್ತಿತೆರಿಗೆ ಪಾವತಿ ಎಂದು ಚಲನ್ ಮೇಲೆ ಯೂನಿಯನ್ ಬ್ಯಾಂಕ್ ನ  ಸೀಲ್ ಲಭ್ಯವಿದ್ದು, ಆದರೆ ಅದೇ ದಿನಾಂಕದಲ್ಲಿ ಯೂನಿಯನ್ ಬ್ಯಾಂಕ್ ಪುಸ್ತಕದ ವಿವರ ಪಟ್ಟಿಯಲ್ಲಿ ಪಾವತಿ ಆಗಿರುವ ಬಗ್ಗೆ ನಮೂದು ಇಲ್ಲದಿರುವುದು ಕಂಡುಬಂದಿತ್ತು. ಅಲ್ಲದೇ ಫೆಬ್ರುವರಿ ನಾಲ್ಕರಂದು ಜನವರಿ 28ರ ಚಲನ್ ಸಂಖ್ಯೆ ಇದ್ದು, ಒಂದೇ ಚಲನ್ ಸಂಖ್ಯೆಗೆ ಬೇರೆ ಬೇರೆ ದಿನಾಂಕಗಳಲ್ಲಿ ಯೂನಿಯನ್ ಬ್ಯಾಂಕ್ ಸೀಲ್ ಉಳ್ಳ ಚಲನ್ ಗಳು ದೊರೆತಿದ್ದು, ಯೂನಿಯನ್ ಬ್ಯಾಂಕ್ ನ ಸೀಲ್ ನ್ನು ದುರ್ಬಳಕೆ ಮಾಡಿ ಆಸ್ತಿ ತೆರಿಗೆ ಪಾವತಿ ಮಾಡಿದ ಹಣವನ್ನು ಪಡೆದು  ಮೋಸ ಮಾಡಿರುವುದು ಬೆಳಕಿಗೆ ಬಂದಿತ್ತು.

ಪ್ರಕರಣಕ್ಕೆ ಸಂಬಧಿಸಿ ಪೊಲೀಸರು ತನಿಖೆಆಗಿ ವಿಶೇಷತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿ ಇಬ್ಬರನ್ನುಬಂಧಿಸಿ ನಕಲಿ ಸೀಲ್‌ ಮತ್ತು  ದಾಖಲೆ ಪತ್ರದ  ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಪ್ಕರಣ ದಾಖಲಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!