Crime newsBlogEconomyEducationGovernmentHighlightsHuman storiesLifestyleLocal newsOthersPoliticsState newsSuccess storiesTop StoriesTrending

ಕಂಡ್ಲೂರು: ಅಕ್ರಮ ಮರಳು ದಂಧೆ – ಸುಪರ್ವೈಸರ್ ಸಹಿತ ಹನ್ನೊಂದು ಜನರ ಬಂಧನ, ಧಕ್ಕೆ ಮಾಲಕ ಸುನಿಲ್ ಶೆಟ್ಟಿ ಎಸ್ಕೇಪ್

Aware others:

ಕುಂದಾಪುರ: ಇಲ್ಲಿಗೆ ಸಮೀಪದ ವರಾಹಿ ನದಿಯ ಕಂಡ್ಲೂರು ಬಿಡ್ಜ್ನ ಕೆಳಗಡೆ ದೋಣಿಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ತುಂಬುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಹನ್ನೊಂದು ಜನ ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ಆರೋಪಿಗಳನ್ನು ಉತ್ತರ ಭಾರತ ಮೂಲದ ಮರಳು ದಕ್ಕೆಯ ದಿನಗೂಲಿ ನೌಕರರಾಗಿರುವ ರಾಮಶಂಕರ ರಾಜಬೀರ್(35 ವರ್ಷ), ರಾಮ ಕುಮಾರ್ (40 ವರ್ಷ), ಗೋವಿಂದ ಚೌದರಿ(26 ವರ್ಷ), ಶಿವಮುನಿ(32 ವರ್ಷ), ಜುನ್ನ ರಾಜಬೀರ್(35 ವರ್ಷ), ಸತ್ಯಾದೇವ(30 ವರ್ಷ), ಕಮಲೇಶ ನಿಸಾದ್(35 ವರ್ಷ), ಸಂತೋಷ ನಿಸಾದ್(23 ವರ್ಷ), ಓಂ ಪ್ರಕಾಶ ರಾಜಬರ್(34 ವರ್ಷ), ರಮೇಶ ರಾಜಬರ್(35 ವರ್ಷ) ಹಾಗೂ ಧಕ್ಕೆಯ ಸೂಪರ್ ವೈಸರ್ ಅಜ್ಮಲ್ ಎಂದು ಗುರುತಿಸಲಾಗಿದೆ. ತಲಾ ಎಪ್ಪತೈದು ಸಾವಿರ ಮೌಲ್ಯದ ನಾಲ್ಕು ದೋಣಿಗಳು, ನಾಲ್ಕೂವರೆ ಸಾವಿರ ಮೌಲ್ಯದ 3 ½ ಯುನಿಟ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ಮರಳು ಧಕ್ಕೆಯ ಮಾಲೀಕ ಸುನಿಲ್ ಶೆಟ್ಟಿ ಹಾಗೂ ದಕ್ಕೆಯ ಸುಪರ್ ವೈಸರ್ ಆದ ಅಜ್ಮಲ್ ರವರು ಒಳ್ಳೆಯ ಮರಳನ್ನು ಹಳ್ನಾಡು KRIDL ಮರಳು ಧಕ್ಕೆಯ ದಡಕ್ಕೆ ತಂದುಕೊಟ್ಟಲ್ಲಿ ಹೆಚ್ಚಿನ ಹಣವನ್ನು ನೀಡುವುದಾಗಿ ಸೂಚಿಸಿದ್ದರಿಂದ ಆರೋಪಿಗಳು ಮರಳು ಧಕ್ಕೆಯ ಜಿಯೋ ಪೆನ್ಸಿಂಗ್ ಬೌಂಡರಿಯ ಆಚೆಗೆ ಒಳ್ಳೆಯ ಮರಳು ಸಿಗುವುದರಿಂದ ನಾವು ಹಣದ ಆಸೆಗೆ ಬೌಂಡರಿ ದಾಟಿ ಹೋಗಿ ರಾತ್ರಿ ವೇಳೆಯಲ್ಲಿ ನದಿಯಿಂದ ಮರಳು ತೆಗೆದು ದೋಣಿಯಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 08/2026 ಕಲಂ: 303(2) R/W 3(5)  BNS & & 4, 4(1)(a),21 MMDR Act ಮತ್ತು 3(1), 42(1), 43(2), 44 Karnataka Minor Mineral Consistent Rule 1994ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!