ಕಾರ್ಕಳದಲ್ಲಿ ಅಂದರ್ ಬಾಹರ್ ಬೆಟ್ಟಿಂಗ್ ಜುಗಾರಿ : 8 ಆರೋಪಿಗಳ ಬಂಧನ
ಉಡುಪಿ: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್‌ಬೆಟ್ಟು ಎಂಬಲ್ಲಿ ಸಾದ್ವಿನ್ ಎಂಬ ಹೆಸರಿನ ಅಶೋಕ ಎಂಬುವರಿಗೆ ಸೇರಿದ ಮನೆಯ ಮೊದಲನೆ ಮಹಡಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಎಂಟು ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಶನಿವಾರ ನಡೆದಿದೆ.




ಈ ಬಗ್ಗೆ ಮಾಹಿತಿ ಪಡೆದ ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್‌ಐ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಯವರು ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ ರೂಪಾಯಿ 22690/- ಹಾಗೂ 52 ಇಸ್ಪೀಟ್ ಎಲೆಗಳು, 16 ಹೊಸ ಇಸ್ಟೀಟ್ ಎಲೆಗಳು ಇರುವ ಪ್ಯಾಕೆಟ್, 10 ಪ್ಲಾಸ್ಟಿಕ್ ಕುರ್ಚಿ, 4 ಪ್ಲಾಸ್ಟಿಕ್ ಟೇಬಲ್ ಹಾಗೂ 9 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.




ಬವಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕು ಗುರುವಾಯನಕೆರೆ, ಕುವಿಟ್ಟು ಗ್ರಾಮದ ಇಸುಬು ಎಂಬಾತನ ಮಗ ಉಮ್ಮರ ಫಾರೂಕ್( 62), ಬಂಟ್ವಾಳ ತಾಲೂಕು ಸಜಿಪಪಡು ಮೂಡ ನಿವಾಸಿ ಸುಲೇಮಾನ್ ಪುತ್ರ ಅಬ್ದುಲ್ ಅಜೀಜ್ (40), ಕಾರ್ಕಳ ತಾಲೂಕು ರೇಂಜಾಳ ಗ್ರಾಮ ಗುಡ್ಡೆಯಂಗಡಿ ಶಾಲೆಯ ಬಳಿ ಶೇಷಗಿರಿ ಪ್ರಭು ಎಂಬುವರ ಮಗ ಸತೀಶ ಎಸ್ ಪ್ರಭು (49), ಮಂಗಳೂರು ಬೊಳಿಯಾರು ನಿವಾಸಿ ಆಹ್ಮದ್ ಭಾವ ಅವರ ಮಗ ಅಬ್ದುಲ್ ರಹಿಮಾನ್(49), ಬಂಟ್ವಾಳ ತಾಲೂಕು ಮೂಡಾ ನಿವಾಸಿ ಇಸ್ಮಾಯಿಲ್ ಪುತ್ರ ಸಮೀರ್(46), ಮಂಗಳೂರು ಕಸಬಾ ಗ್ರಾಮ ಬೇಂಗ್ರೆ ನಿವಾಸಿ ಹಮೀದ್ ಪುತ್ರ ಸುಲೇಮಾನ್(45), ಬಂಟ್ವಾಳ ತಾಲೂಕು ಸಜಿಪ ನಡು ಕಂಚಿನಡ್ಕ ಪದವು ನಿವಾಸಿ ಅಬ್ಬುಬಕ್ಕರ್ ಪುತ್ರ ಇರ್ಪಾನ್(26) ಮತ್ತು ಬಂಟ್ವಾಳ ತಾಲೂಕು ಸಜಿಪ ಮೂನ್ನೂರು ನಿವಾಸಿ ಭಾಸ್ಕರ ಎಂಬವನ ಮಗ ಚೇತಕ್(38) ಎಂದು ಗುರುತಿಸಲಾಗಿದೆ. ಉಳಿದ ಮೂರು ಆರೋಪಿಗಳು ಓಡಿ ಹೋಗಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 23/26 U/s. 79,80 KP Act. 112 BNSರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
