BlogEconomyEducationGovernmentHighlightsHuman storiesLifestyleLocal newsOthersPoliticsTop StoriesTrending

ಪಾಂಡೇಶ್ವರ ಗ್ರಾ.ಪಂ. ಜಮಾಬಂದಿ, ಸಮರ್ಪಕ ಅಧಿಕಾರಿಗಳನ್ನು ನೇಮಕಗೊಳಿಸಿ -ವೈ.ಬಿ ರಾಘವೇಂದ್ರ

Aware others:

ಕುಂದಾಪುರ: ಪಾಂಡೇಶ್ವರ ಗ್ರಾಮ ಪಂಚಾಯತ್ 2024- 25ನೇ ಸಾಲಿನ  ವಾರ್ಷಿಕ ಲೆಕ್ಕ ಪತ್ರಗಳ ಜಮಾಬಂದಿ ಕಾರ್ಯಕ್ರಮ  ಫೆ.9ರಂದು  ಪಂಚಾಯತ್ ಸಭಾಂಗಣದಲ್ಲಿ ಜರಗಿತು.

ಗ್ರಾಮ ಪಂಚಾಯತ್ ಜಮಾಬಂದಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉನ್ನತ  ಅಧಿಕಾರಿಗಳು ಭಾಗಿಯಾಗದೆ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳನ್ನು ನ್ಯಾಯೋಚಿತವಲ್ಲ. ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅವರಿಗೆ ವಿಷಯ ಮಂಡಿಸಲು ಸಾಧ್ಯವಿಲ್ಲ.  ಈ ರೀತಿಯ ಜಮಾಬಂದಿ ಕಾರ್ಯಕ್ರಮದಲ್ಲಿ ಪಂಚಾಯತ್‌ಗೆ ಸಂಬಂಧಿಸಿ ಅಧಿಕಾರಿಗಳನ್ನು ಮುಂದಿನ ಜಮಾಬಂದಿ ಅಥವಾ ಪಂಚಾಯತ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಂಬಂದಿಸಿದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೈ.ಬಿ ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಮಾಬಂದಿ ಅಧಿಕಾರಿಗಳಾಗಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾಗೀರಥಿ ಆಚಾರ್ ಅಧ್ಯಕ್ಷತೆ ವಹಿಸಿ ನಿರ್ವಹಿಸಿದರು. ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ, ಉಪಾಧ್ಯಕ್ಷ ವೈ ಬಿ ರಾಘವೇಂದ್ರ, ಸದಸ್ಯರಾದ ಸ್ವಿಲ್ವೆಸ್ಟರ್ ಡಿಸೋಜ, ಪ್ರತಾಪ್ ಶೆಟ್ಟಿ ಸಾಸ್ತಾನ ಉಪಸ್ಥಿತರಿದ್ದರು.

ಪರಿಶೀಲನಾ ಅಧಿಕಾರಿಗಳಾಗಿ ಕೊಕ್ಕರ್ಣೆ ಗ್ರಾಮ ಪಂಚಾಯತ್  ದ್ವಿ ದರ್ಜೆ ಸಹಾಯಕಿ ಆಶಾ,ಅಭಿವೃದ್ಧಿ ಯೋಜನಾ ಇಲಾಖೆ, ಬ್ರಹ್ಮಾವರ ಇದರ ಮೇಲ್ವಿಚಾರಕಿ ಪೂರ್ಣಿಮ ಎಸ್ ಜಮಾಬಂದಿ ವರದಿ ವಾಚಿಸಿದರು. ಪಿಡಿಒ ವಂದನಾ ಜಮಾಬಂದಿ ಏರ್ಪಡಿಸಿದ ಕುರಿತು ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು. ಪಂಚಾಯತ್ ಕಾರ್ಯದರ್ಶಿ ವಿಜಯ ಭಂಢಾರಿ ಸಭೆಯನ್ನು ನಿರ್ವಹಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!