ಬಾಲಪ್ರತಿಭೆ ಧನ್ವಿ ಮರವಂತೆಗೆ ರಾಜ್ಯಮಟ್ಟದ ಬಾಲ ಗೌರವ ಪ್ರಶಸ್ತಿ : ಬೆಳಗಾವಿಯ ಸುವರ್ಣಸೌಧದಲ್ಲಿ ಸಮ್ಮಾನ

ಕುಂದಾಪುರ: ಅತ್ಯಂತ ಕಿರಿಯ ವಯಸ್ಸಿನಲ್ಲಿ ಮಾಡಿದ ಸಾಧನೆಗಾಗಿ ಕರಾವಳಿಯ ಕುವರಿ ಧನ್ವಿ ಮರವಂತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯೊಂದಿಗೆ ಕೊಡ ಮಾಡುವ ರಾಜ್ಯಮಟ್ಟದ ಬಾಲ ಗೌರವ ಪ್ರಶಸ್ತಿ ಲಭಿಸಿದೆ.

ಮಂಗಳವಾರ ಬೆಳಗಾವಿಯ ಸುವರ್ಣಸೌಧದ ಆಡಿಟೋರಿಯಂನಲ್ಲಿ ನಡೆದ ಕರ್ನಾಟಕ ಸರ್ಕಾರದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಮ್ಮಿಕೊಂಡ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ 2023.24ನೇ ಸಾಲಿನ ರಾಜ್ಯಮಟ್ಟದ ಬಾಲ ಗೌರವ ಪ್ರಶಸ್ತಿ ನೀಡಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಬಾಲ ಅಕಾಡೆಮಿ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ್ ಹಾಗೂ ಹಲವಾರು ಗಣ್ಯರ ಸಮ್ಮುಖದಲ್ಲಿ ಯೋಗ ಹಾಗೂ ಬಹುಮುಖ ಬಾಲ ಪ್ರತಿಭೆ ಧನ್ವಿ ಮರವಂತೆಯವರು ಪ್ರಶಸ್ತಿ ಸ್ವೀಕರಿಸಿದರು.

ಮರವಂತೆಯ ಶಿವಮಾಸ್ತಿ ಮನೆ ಜ್ಯೋತಿ ಚಂದ್ರಶೇಖರ್ ಅವರ ಪುತ್ರಿ ಧನ್ವಿ, ಹೆಮ್ಮಾಡಿಯ ಜನತಾ ಹೆಮ್ಮಾಡಿ ಇಂಡಿಪೆಂಡೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾಳೆ.



