BlogCulturalEconomyEducationFashionHighlightsHuman storiesOthersReligionTop StoriesTrending

ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆದಾಗ ಸಮಾಜ ಸದೃಢ: ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಆಡಳಿತ ಕಚೇರಿ ಉದ್ಘಾಟಿಸಿದ ವಿಧುಶೇಖರ ಭಾರತೀ ಸ್ವಾಮೀಜಿಗಳು

Aware others:

ಕುಂದಾಪುರ:  ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರ ಇದರ ನೂತನ ಕೊಠಡಿ ಹಾಗೂ ಆಡಳಿತ ಕಛೇರಿಯ ಉದ್ಘಾಟನಾ ಸಮಾರಂಭವು ಗುರುವಾರ ಶಾಲೆಯ ಆವರಣದಲ್ಲಿ ನಡೆಯಿತು.

ಶಾಲೆಯ ನೂತನ ಕೊಠಡಿ ಹಾಗೂ ಆಡಳಿತ ಕಛೇರಿಯನ್ನು ಉದ್ಘಾಟಿಸಿ ಉಪದೇಶ ನೀಡಿದ ಶೃಂಗೇರಿ ಶಾರದಾ ಪೀಠದ ಶ್ರೀಮದ್ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು, ಶಿಕ್ಷಣ ಪಡೆಯುವುದು ಮತ್ತು ನೀಡುವುದು ಎರಡೂ ಬಹುಮುಖ್ಯವಾದ ಸೇವೆ. ತಾನು ಕಲಿತಿದ್ದನ್ನು ಬೇರೆಯವರಿಗೆ ಹಂಚುವ ಮೂಲಕ ಜ್ಞಾನರ್ಜನೆಗೆ ದಾರಿದೀಪವಾಗುತ್ತಿರುವ ಗಣೇಶ ಮೊಗವೀರ ಮತ್ತು ಅವರ ತಂಡದ ಸಾಧನೆ ಶ್ಲಾಘನೀಯವಾದುದು ಎಂದರು. ಶಿಕ್ಷಣ ಸಂಸ್ಥೆಗಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸಬೇಕು. ವಿದ್ಯೆಯ ಜೊತೆ ಸಂಸ್ಕಾರವಿದ್ದರೆ ಅವರು ಮಹಾನ್ ವ್ಯಕ್ತಿಯಾಗುತ್ತಾನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಮ್ಮಾಡಿ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ ಮೊಗವೀರ ಮತ್ತವರ ಧರ್ಮಪತ್ನಿ ಶ್ರೀಗಳ ಪಾದಪೂಜೆ ನೆರವೇರಿಸಿದರು.

ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇ.ಮೂ. ಲೋಕೇಶ್ ಅಡಿಗ ಬಡಾಕೆರೆ, ತಾ.ಪಂ. ಮಾಜಿ ಉಪಾಧ್ಯಕ್ಷೆ ಶ್ಯಾಮಲ ಕುಂದರ್, ಜನತಾ ಸಮೂಹ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಶ್ಯಾಮಲ ಗಣೇಶ್ ಮೊಗವೀರ, ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಶೇಖರ್ ಖಾರ್ವಿ, ನಾವುಂದ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ, ಹೆಮ್ಮಾಡಿ ಜನತಾ ಪಿ.ಯು. ಕಾಲೇಜಿನ ಉಪ ಪ್ರಾಂಶುಪಾಲ ರಮೇಶ್ ಪೂಜಾರಿ, ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರ ಮುಖ್ಯೋಪಾಧ್ಯಾಯನಿ ದೀಪಿಕಾ ಆಚಾರ್ಯ, ಪುರೋಹಿತ ಲಕ್ಷ್ಮೀಶ ಅಡಿಗ ಬಡಾಕೆರೆ, ಗಜೇಂದ್ರ ಹೊಳ್ಳ ಹೆಮ್ಮಾಡಿ, ಹಾಗೂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಇದ್ದರು.

ಜನತಾ ಸಮೂಹ ಸಂಸ್ಥೆಯ ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಸ್ವಾಗತಿಸಿದರು. ಪುರೋಹಿತ ದಾಮೋದರ್ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!